ಕೃಷ್ಣೆಗೆ ಹರಿದು ಬಂದ ಅಪಾರ ಪ್ರಮಾಣದ ನೀರು

RBK-10-3
ರಬಕವಿ ಮಹಿಷವಾಡಗಿ ಸೇತುಗೆ ಭರ್ತಿಯಾಗುತ್ತಿರುವುದು.
Published on

ರಬಕವಿ/ಬನಹಟ್ಟಿ: ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಿಂದ ಅಪಾರ ನೀರು ಹರಿದುಬರುತ್ತಿದ್ದು, ಸೋಮವಾರ ನದಿ ತನ್ನ ಒಡಲು ತುಂಬಿಕೊಂಡು ಹರಿಯಲಾರಂಭಿಸಿದೆ.

ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಕೊಯ್ನ ಹಾಗೂ ದೂದಗಂಗಾ ಜಲಾಶಯಗಳಿಂದ ಅಪಾರ ನೀರು ಹರಿಬಿಡುತ್ತಿದ್ದು, ಇದರಿಂದಾಗಿ ಕೃಷ್ಣೆಯಲ್ಲಿ ನೀರಿನ ಪ್ರಮಾಣ ಏರಿಕೆ ಆಗಿದೆ.

ಮತ್ತಷ್ಟು ಭಾರಿ ನೀರು: ನಿತ್ಯ 5 ರಿಂದ 10 ಕ್ಯುಸೆಕ್‌ನಷ್ಟು ನೀರು ರಾಜ್ಯಕ್ಕೆ ಹರಿದು ಬರುತ್ತಿದೆ. ನೀರಿನ ಹರಿವಿನ ಪ್ರಮಾಣ ಇನ್ನೆರಡು ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಅಬ್ಬರದ ಮಳೆ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವಾರದಿಂದ ಭಾರಿ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆ ಬರದ ಛಾಯೆಯಲ್ಲಿ ಮುಳುಗಿದ್ದ ವಿಜಯಪುರ- ಬೆಳಗಾವಿ-ಬಾಗಲಕೋಟೆ ಜಿಲ್ಲೆಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಮಹಿಷವಾಡಗಿ ಸೇತುವೆ ತುಂಬುವ ಹಂತ: ಹರಿದು ಬರುವ ನೀರಿನ ಪ್ರಮಾಣ ಮುಂದುವರಿದರೆ ಇನ್ನೆರಡು ದಿನಗಳಲ್ಲಿ ಮಹಿಷವಾಡಗಿ ಸೇತುವೆ ಮುಳುಗುವ ಸಾಧ್ಯತೆಯಿದ್ದು, ಬೋಟ್ ವ್ಯವಸ್ಥೆ ಕಲ್ಪಿಸಬೇಕಾಗುವುದು ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net