

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ‘ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್’ಗೆ ಬಾಂಬ್ ಇಡೋದಾಗಿ 'ಹುಚ್ಚ ಸ್ವಾಮಿ ವೆಂಕಟ್' ಹೆಸರಿನಲ್ಲಿ ಬೆದರಿಕೆ ಮೇಲ್ ಬಂದ ಪ್ರಕರಣ ಸಂಬಂಧ ನಟ ಹುಚ್ಚ ವೆಂಕಟ್ ಆಕ್ರೋಶ ಹೊರಹಾಕಿದ್ದಾರೆ.
'ನನ್ ಹೆಸ್ರನ್ನ ಯಾರೋ ಮಿಸ್ಯೂಸ್ ಮಾಡಿದ್ದಾರೆ. ಯಾರೂ ನನ್ನ ಹೆಸರನ್ನು ಮಿಸ್ಯೂಸ್ ಮಾಡ್ಬೇಡಿ. ನನ್ನ ಹೆಸ್ರಲ್ಲಿ ಮೇಲ್ ಕಳಿಸೋದು ಯಾವ್ದೂ ಮಾಡ್ಬೇಡಿ' ಎಂದು ಹುಚ್ಚ ವೆಂಕಟ್ ಪ್ರತಿಕ್ರಿಯಿಸಿದ್ದಾರೆ.
ಆರ್ಆರ್ ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ಗೆ ಬಾಂಬ್ ಇಡುವುದಾಗಿ ಭಾನುವಾರ ಸಂಜೆ 3ನೇ ಯೂನಿಟ್ಗೆ ಕಿಡಿಗೇಡಿಗಳು ಬೆದರಿಕೆ ಮೇಲ್ ಕಳುಹಿಸಿದ್ದರು. ಸೋಮವಾರ ಬೆಳಗ್ಗೆ ಸಿಬ್ಬಂದಿ ಶಾಲೆಗೆ ಬಂದಾಗ ಮೇಲ್ ನೋಡಿ ಗಾಬರಿಯಾಗಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಆರ್ಆರ್ ನಗರ ಠಾಣೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತು ಕಂಡು ಬಂದಿಲ್ಲ.
Huchaswamyvenkat96@gmail.com ಅನ್ನೋ ಮೇಲ್ ಐಡಿಯಿಂದ ಭಾನುವಾರ ಸಂಜೆ 6.30ಕ್ಕೆ ಸ್ಕೂಲ್ಗೆ ಬೆದರಿಕೆ ಮೇಲ್ ಬಂದಿದೆ. ‘ಕ್ಯಾಂಪಸ್ ಹಾಗೂ ಶಾಲೆಯಲ್ಲಿ ಬಾಂಬ್ ಇಡಲಾಗಿದೆ. ನಾಳೆ(ಸೋಮವಾರ) ಬೆಳಗ್ಗೆ 10 ಗಂಟೆಗೆ ಬ್ಲಾಸ್ಟ್ ಆಗುವ ಹಾಗೇ ಫಿಕ್ಸ್ ಮಾಡಲಾಗಿದೆ. ಶಾಲೆ ಆವರಣದ 200 ಮೀಟರ್ ಅದರ ಎಫೆಕ್ಟ್ ಆಗುತ್ತೆ. ಥ್ಯಾಂಕ್ಸ್, ಬಾಂಬ್ ಟೆರರಿಸ್ಟ್’ ಎಂದು ಮೇಲ್ನಲ್ಲಿ ಬರೆಯಲಾಗಿದೆ.