ಅಪಾಯದ ಸ್ಥಿತಿಯಲ್ಲಿ ಮನೆ

kls slide
ಕಳಸ ಗ್ರಾಪಂ ಕರಗದ್ದೆ ಅತ್ತಿಕೊಂಡ ರಸ್ತೆಯ ರಮೇಶ್ ಗೌಡ ಅವರ ಮನೆಯ ಹತ್ತಿರ ಧರೆ ಕುಸಿದಿರುವುದು.
Published on

ಳಸ: ತಾಲೂಕಿನಾದ್ಯಂತ ಮಳೆ ಅಬ್ಬರ ಕಡಿಮೆಯಾದರೂ ಹಾನಿ ಮುಂದುವರಿದಿದೆ. ಶುಕ್ರವಾರ ರಾತ್ರಿವರೆಗೆ ನಿರಂತರವಾಗಿ ಸುರಿಯುತ್ತಿದ್ದ ಮಳೆ ಶನಿವಾರ ಬಿಡುವು ನೀಡಿತು. ಆದರೆ ರಾತ್ರಿ ಗಾಳಿ, ಮಳೆಯಿಂದ ಶನಿವಾರ ಬೆಳಗಿನವರೆಗೂ ಕಳಸ-ಹೊರನಾಡು ಮಧ್ಯ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡಿತ್ತು. ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯ ನೆಲ್ಲಿಬೀಡು ಎಂಬಲ್ಲಿ ಭದ್ರಾ ನದಿಯ ನೀರು ರಸ್ತೆಗೆ ಹರಿದು ಕೆಲ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು.

ಶನಿವಾರ ಬೆಳಗ್ಗೆ ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯ ಕಟ್ನಿರ್ ಎಂಬಲ್ಲಿ ರಸ್ತೆಗೆ ಮರ ಬಿದ್ದಿದ್ದರಿಂದ ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಸಂಸೆ ಗ್ರಾಪಂ ಬಾಲ್ಗಲ್ ಎಂಬಲ್ಲಿ ಮುದರ ಎಂಬುವವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ. ಕಳಸ ಗ್ರಾಪಂ ಕರಗದ್ದೆ ಅತ್ತಿಕೊಂಡ ರಸ್ತೆಯ ರಮೇಶ್ ಗೌಡ ಅವರ ಮನೆಯ ಹತ್ತಿರ ಧರೆ ಕುಸಿದಿದ್ದು, ಮನೆ ಅಪಾಯದ ಸ್ಥಿತಿ ಎದುರಿಸುತ್ತಿದೆ. ಮುನ್ನೂರ್‌ಪಾಲ್ ಸಂಪಿಗೆ ಕಟ್ಟೆ ಲಕ್ಷ್ಮಣ ಅವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net