ಮನೆಗೆ ನುಗ್ಗಿ ವಿವಾಹಿತೆ ಮೇಲೆ ಅತ್ಯಾಚಾರವೆಸಗಿ ಕೊಲೆ: ಹೊನ್ನಾಳಿ ತಾಲೂಕಲ್ಲಿ ಅಮಾನುಷ ಕೃತ್ಯ

rape
Published on

ಹೊನ್ನಾಳಿ: ಮನೆಯಲ್ಲಿ ವಿವಾಹಿತ ಮಹಿಳೆ ಒಬ್ಬರೇ ಇರುವುದನ್ನ ಗಮನಿಸಿದ ಕಾಮುಕರು ಮನೆಗೆ ನುಗ್ಗಿ ಆಕೆ ಮೇಲೆ ಅತ್ಯಾಚಾರ ಎಸಗಿ, ಕೊಂದಿದ್ದಾರೆ.

ಇಂತಹ ಅಮಾನವೀಯ ಕೃತ್ಯ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. 40 ವರ್ಷದ ಮಹಿಳೆ ಮೃತ ದುರ್ದೈವಿ. ಇವರ ಪತಿ ಕುಂದೂರಿಗೆ ಹೋಗಿದ್ದರು. ರಾತ್ರಿ 9 ಗಂಟೆಗೆ ಮನೆಗೆ ಮರಳಿದಾಗ ಪತ್ನಿ ಶವವಾಗಿ ಬಿದ್ದಿದ್ದಳು.

ಗ್ರಾಮದ ಹರೀಶ್​ ಎಂಬಾತ ರಾತ್ರಿ ವೇಳೆ ಮನೆಗೆ ನುಗ್ಗಿ ಈ ಕೃತ್ಯವೆಸಗಿದ್ದಾನೆ ಎಂದು ಮೃತರ ಪತಿ, ಹೊನ್ನಾಳಿ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಎಸ್ಪಿ ರಿಷ್ಯಂತ್​, ಡಿವೈಎಸ್ಪಿ ಡಾ.ಸಂತೋಷ್​, ಸಿಪಿಐ ದೇವರಾಜ್​, ಪಿಎಸ್​ಐ ಬಸವನಗೌಡ ಬಿರಾದರ್​ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶೀಘ್ರವೇ ಆರೋಪಿಯನ್ನು ಬಂಧಿಸುವುದಾಗಿ ಸಿಪಿಐ ದೇವರಾಜ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net