ಧಾರಾಕಾರ ಮಳೆ: ಚಲಿಸುತ್ತಿದ್ದ ರೈಲಿನ ಮೇಲೆ ಗುಡ್ಡ ಕುಸಿತ!

rain-train
Published on

ಹುಬ್ಬಳ್ಳಿ: ಚಲಿಸುತ್ತಿದ್ದ ನಿಜಾಮುದ್ದಿನ್-ವಾಸ್ಕೋ ರೈಲಿನ ಮೇಲೆ ಗುಡ್ಡ ಕುಸಿದ ಘಟನೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಶುಕ್ರವಾರ ಸಂಭವಿಸಿದೆ.

ಭಾರಿ ಮಳೆಯಿಂದಾಗಿ ದೂಧ್​ಸಾಗರ-ಸೋಲೆಂ ಹಾಗೂ ದೂಧ್​ಸಾಗರ- ಕ್ಯಾಸಲ್ ರಾಕ್ ಮಧ್ಯೆ ಎರಡು ಕಡೆ ಗುಡ್ಡ ಕುಸಿದಿದ್ದು, ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದ ಮಣ್ಣನ್ನು ತೆರವು ಮಾಡುವ ಕಾರ್ಯ ಭರದಿಂದ ಸಾಗಿದೆ.

ಗುಡ್ಡ ಕುಸಿತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟ್ರ್ಯಾಕ್ ಮೇಲೆ‌ ಬಿದ್ದ‌ ಮಣ್ಣನ್ನು ನೈರುತ್ಯ ರೈಲ್ವೆ ಸಿಬ್ಬಂದಿ ತೆರವು ಮಾಡುತ್ತಿದ್ದಾರೆ. ನೈರುತ್ಯ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಅರವಿಂದ ಮಲಖಾಡೆ ತಂಡ ಸ್ಥಳಕ್ಕೆ‌ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪ್ರಯಾಣಿಕರರಿಗೆ ಊಟ, ಉಪಹಾರ, ಕಾಫಿ‌-ಟೀ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net