ಐತಿಹಾಸಿಕ ಕಲಾದಗಿ ಐಬಿಗೆ ಹೈಟೆಕ್ ಟಚ್

A high-tech touch to IB, a historical art form
ಕಲಾದಗಿ ಐಬಿಯಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುತ್ತಿರುವ ಶಾಸಕ ಜೆ.ಟಿ. ಪಾಟೀಲ. ಗ್ರಾಪಂ ಅಧ್ಯಕ್ಷೆ ಖಾತುನಬೀ ರೋಣ, ಉಪಾಧ್ಯಕ್ಷ ಪಕೀರಪ್ಪ ಮಾದರ, ಕಲಾದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸಂಶಿ, ಮುಖಂಡರಾದ ಎಂ.ಬಿ. ಸೌದಾಗರ, ವಿ.ಜಿ. ದೇಶಪಾಂಡೆ ಇತರರಿದ್ದರು.
Published on

ಕಲಾದಗಿ : ಗ್ರಾಮದಲ್ಲಿರುವ ಐತಿಹಾಸಿಕ ಪ್ರವಾಸಿ ಮಂದಿರದ ಆವರಣದಲ್ಲಿ 3 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡಗಳ ಕಾಮಗಾರಿಯ ಭೂಮಿಪೂಜೆ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿ., ಅಧ್ಯಕ್ಷ ಜೆ.ಟಿ.ಪಾಟೀಲ ನೆರವೇರಿಸಿದರು.

ಈ ಸಂದರ್ಭದಲ್ಲಿ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣವಾಗಿರುವ ಸದ್ಯದ ಪ್ರವಾಸಿ ಮಂದಿರಕ್ಕೆ ತನ್ನದೇ ಆದ ಇತಿಹಾಸವಿದೆ. ಇದು ಬೆಳಗಾವಿ- ಬಾಗಲಕೋಟೆ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಜಿಲ್ಲೆಯಲ್ಲಿನ ಜನಾಕರ್ಷಣಾ ಪ್ರವಾಸಿ ಮಂದಿರವಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರನ್ನು ಇನ್ನಷ್ಟು ಆಕರ್ಷಣೆಗೊಳಿಸುವ ದಿಶೆಯಲ್ಲಿ 3 ಕೋಟಿ ರೂ. ಅನುದಾನದಲ್ಲಿ ಮತ್ತಷ್ಟು ಕಟ್ಟಡಗಳು ನಿರ್ಮಾಣವಾಗಲಿವೆ ಎಂದರು.

ಗ್ರಾಪಂ ಅಧ್ಯಕ್ಷೆ ಖಾತುನಬೀ ರೋಣ, ಉಪಾಧ್ಯಕ್ಷ ಪಕೀರಪ್ಪ ಮಾದರ, ಕಲಾದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸಂಶಿ, ಮುಖಂಡರಾದ ಎಂ.ಬಿ. ಸೌದಾಗರ, ವಿ.ಜಿ. ದೇಶಪಾಂಡೆ, ಸಂಗಣ್ಣ ಮುಧೋಳ, ಪಾಂಡು ಪೊಲೀಸ್, ಸಲೀಂಶೇಖ, ಹಸನಹ್ಮದ ರೋಣ, ಕೆ.ಟಿ. ಪಾಟೀಲ, ನಿಂಗಪ್ಪ ಅರಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net