ಬಡ ಮಕ್ಕಳಿಗೆ ಅಕ್ಷರ, ಆಶ್ರಯ ಕೊಟ್ಟ ನಾಯಕ

NRD 1
Published on

ನರಗುಂದ: ಡಿ.ದೇವರಾಜ ಅರಸು ಅವರು ಸಮಾಜದಲ್ಲಿರುವ ದಲಿತರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ ಎಂದು ರೋಣ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಪ್ರಭಾಕರ ಉಳ್ಳಾಗಡ್ಡಿ ಹೇಳಿದರು.

ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಹಾಗೂ ಸದ್ಭಾವನಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದೇಶದಲ್ಲಿ ಮೊದಲ ಬಾರಿಗೆ ಛತ್ರಪತಿ ಶಾಹು ಮಹಾರಾಜರು ಮೀಸಲಾತಿ ಪರಿಕಲ್ಪನೆ ಹುಟ್ಟು ಹಾಕಿದರು. ಶಾಹು ಮಹಾರಾಜರು ಡಾ. ಅಂಬೇಡ್ಕರ್ ಅವರಿಗೆ ಆಶ್ರಯ ನೀಡಿದ್ದರು. ಅರಸು ಅವರು ತಮ್ಮ ಕಾಲದಲ್ಲಿ ಎಲ್.ಜಿ. ಹಾವನೂರ ಮೀಸಲಾತಿ ವರದಿ ಜಾರಿಗೆ ತಂದು ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ಒದಗಿಸಿದ್ದಾರೆ ಎಂದರು.

ತಾಪಂ ಇಒ ಎಸ್.ಕೆ. ಇನಾಮದಾರ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್. ಮಜ್ಜಗಿ ಪ್ರತಿಜ್ಞಾವಿಧಿ ಬೋಧಿಸಿದರು. ಗೇಡ್ 2 ತಹಸೀಲ್ದಾರ್ ಪರಶುರಾಮ ಕಲಾಲ, ದ್ಯಾಮಣ್ಣ ಸವದತ್ತಿ, ಡಾ. ಸಿ.ಕೆ. ರಾಚನಗೌಡ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮೀ ಹತ್ತಿಕಾಳ ಮಾತನಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ವಸತಿ ನಿಲಯದ ಅಡುಗೆ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷೆ ನೀಲಮ್ಮ ವಡ್ಡಿಗೇರಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ನೀಲಪ್ಪ ಗುಡದನ್ನವರ, ಪವಾಡೆಪ್ಪ ವಡ್ಡಿಗೇರಿ, ಚನ್ನು ಮಾದರ, ಪ್ರವೀಣ ಹೊಸಮನಿ, ಮಲ್ಲಪ್ಪ ಅಬ್ಬಿಗೇರಿ, ಪ್ರದೀಪ ಕದಂ, ಫಕ್ರುದ್ದೀನ್ ನದಾಫ, ಮಂಜುನಾಥ ಘಾಳಿ, ಆನಂದ ಅಡಿಕೆ, ಶಿವಾಜಿ ಉಪಸ್ಥಿತರಿದ್ದರು. ಪೂರ್ಣಿಮಾ ಸಂಗಡಿಗರು ಪ್ರಾರ್ಥಿಸಿದರು. ಎಂ.ಬಿ. ಪಾಟೀಲ ಸ್ವಾಗತಿಸಿದರು. ಸಲ್ಮಾ ನದಾಫ್, ಫಾತಿಮಾ ನದಾಫ್ ನಿರೂಪಿಸಿದರು. ಪ್ರವೀಣ ಹೊಸಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net