ದೊಡ್ಡಿಗೆ ನುಗ್ಗಿ 15 ಕುರಿಮರಿಗಳ ಹೊಂದುಹಾಕಿದ ತೋಳದ ಹಿಂಡು

NRD- SHEEF
ಸುರಕೋಡ ಗ್ರಾಮದಲ್ಲಿ ತೋಳದ ಹಿಂಡಿನ ದಾಳಿಗೆ ಬಲಿಯಾದ ಕುರಿಮರಿಗಳು
Published on

ನರಗುಂದ: ತೋಳದ ಹಿಂಡು ಕುರಿದೊಡ್ಡಿಗೆ ನುಗ್ಗಿ 15 ಕುರಿಮರಿಗಳನ್ನು ಕೊಂದು ಹಾಕಿದ ಘಟನೆ ತಾಲೂಕಿನ ಸುರಕೋಡ ಗ್ರಾಮದ ಜಮೀನಿನಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಕಲ್ಲಪ್ಪ ಹನುಮಂತಪ್ಪ ಮಜ್ಜಗಿ ಎಂಬುವವರ 1 ಲಕ್ಷ ರೂಪಾಯಿ ಮೌಲ್ಯದ ಕುರಿಮರಿಗಳನ್ನು ತೋಳಗಳು ತಿಂದು ಹಾಕಿವೆ. ಜೀವನೋಪಾಯಕ್ಕಾಗಿ ಕುರಿ ಸಾಕಾಣಿಕೆ ಮಾಡುತ್ತಿರುವ ಕಲ್ಲಪ್ಪ 100ಕ್ಕೂ ಹೆಚ್ಚು ಮೇಕೆ ಮತ್ತು ಕುರಿಗಳನ್ನು ಸಾಕಿದ್ದಾರೆ. ಎಂದಿನಂತೆ ಗುರುವಾರ ಬೆಳಗ್ಗೆ ಕಲ್ಲಪ್ಪ ಕುರಿ ಮೇಯಿಸಲು ಹೋಗಿದ್ದ. 19 ಕುರಿ ಮರಿಗಳು ಇತ್ತೀಚೆಗೆ ಜನ್ಮತಾಳಿದ್ದರಿಂದ ಅವುಗಳನ್ನು ದೊಡ್ಡಿಯೊಳಗೆ ಬಿಡಲಾಗಿತ್ತು. ಅವುಗಳ ಪಾಲನೆಯ ಜವಾಬ್ದಾರಿ ಕಲ್ಲಪ್ಪ ಮಜ್ಜಗಿ ನಿರ್ವಹಿಸುತ್ತಿದ್ದ. ದೊಡ್ಡ ಕುರಿಗಳನ್ನು ಹಳ್ಳದ ಸಮೀಪ ಮೇಯಿಸಲು ಕರೆದೊಯ್ದಗ 19 ಮರಿಗಳನ್ನು ಕಬ್ಬಿಣದ ದೊಡ್ಡಿಯೊಳಗೆ ಹಾಕಿ, ಕಲ್ಲಪ್ಪ ಮಧ್ಯಾಹ್ನ ಊಟಕ್ಕಾಗಿ ಸುರಕೋಡ ಗ್ರಾಮದ ಮನೆಗೆ ತೆರಳಿದ್ದ. ಈ ವೇಳೆ ನಾಲ್ಕು ತೋಳಗಳು ಕುರಿದೊಡ್ಡಿಗೆ ನುಗ್ಗಿ 15 ಮರಿಗಳನ್ನು ಎಳೆದಾಡಿ ಕೊಂದುಹಾಕಿವೆ. ಸುರಕೋಡ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net