ಹೆಪಟೈಟಿಸ್ ಮುಕ್ತ ಭಾರತ ಗುರಿ

28srl1
ಶಿರಾಳಕೊಪ್ಪ ಕದಂಬ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹೆಪಟೈಟಿಸ್ ದಿನಾಚರಣೆಯಲ್ಲಿ ಡಾ.ಮಹಲಿಂಗ ಕೊಲ್ಲೆ, ಯುವರಾಜ್, ರಾಜೇಂದ್ರ, ಅರುಣ್ ಕುಮಾರ್, ಕೀರ್ತಿ, ರೇವಣಪ್ಪ, ಸೌಭಾಗ್ಯಾ ಇತರರಿದ್ದರು.
Published on

ಶಿರಾಳಕೊಪ್ಪ: ಹೆಪಟೈಟಿಸ್‌ನಲ್ಲಿ 5 ವಿಧಗಳಿದ್ದು ಎ, ಬಿ, ಸಿ, ಡಿ, ಇ ವಿಧಗಳಾಗಿ ಮಾನವನ ದೇಹ ಸೇರುತ್ತಿವೆ. ಅವುಗಳನ್ನು ತಡೆಗಟ್ಟುವುದು ಅತಿ ಮುಖ್ಯವಾಗಿದ್ದು 2030ರ ಒಳಗೆ ಭಾರತವನ್ನು ಹೆಪಟೈಟಿಸ್ ಮುಕ್ತ ದೇಶವನ್ನಾಗಿಸುವ ಗುರಿ ಇದೆ ಎಂದು ಶಿರಾಳಕೊಪ್ಪ ಸಮುದಾಯ ಆಸ್ಪತ್ರೆಯ ವೈದ್ಯಾಽಕಾರಿ ಡಾ. ಮಹಲಿಂಗ ಕೊಲ್ಲೆ ತಿಳಿಸಿದರು.

ಶುಕ್ರವಾರ ಪಟ್ಟಣದ ಸಮುದಾಯ ಆಸ್ಪತ್ರೆ, ಸುಣ್ಣದಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಕದಂಬ ಪ್ರಥಮ ದರ್ಜೆ ಕಾಲೇಜಿನ ಆರ್‌ಆರ್‌ಸಿ ಘಟಕದಿಂದ ಹಮ್ಮಿಕೊಂಡಿದ್ದ ಎಚ್‌ಐವಿ ಬಗ್ಗೆ ಮಾಹಿತಿ ಮತ್ತು ವಿಶ್ವ ಹೆಪಟೈಟಿಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನಶೈಲಿ ಮತ್ತು ವರ್ತನೆ ಅರಿವು ಮೂಡಿಸುವುದು, ಲಸಿಕೆ ಹಾಕಿಸುವಿಕೆ, ಸುರಕ್ಷಿತ ರಕ್ತ ಮತ್ತು ಅದರ ಉತ್ಪನ್ನಗಳ ಬಳಕೆ, ಸುರಕ್ಷಿತ ಚುಚ್ಚುಮದ್ದು ನೀಡುವಿಕೆ, ಸುರಕ್ಷಿತ ನೀರು ಸ್ವಚ್ಛ ಶೌಚಗೃಹ ಬಳಸುವಿಕೆ ಪ್ರಮುಖವಾದ ನಿಯಂತ್ರಣ ವಿಧಾನಗಳಾಗಿವೆ. ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಹಾಗೂ ಪ್ರಯೋಗಾಲಯ ಸೇವೆ, ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ, ಹೆಚ್ಚಿನ ಪ್ರಯೋಗಾಲಯ ಸೇವೆ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಯುವರಾಜ್ ಮಾತನಾಡಿ, ಎಚ್‌ಐವಿ ಎಂಬುದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗಗಳಾಗಿದ್ದು ಇದನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ. ವಿಶೇಷವಾಗಿ ಯುವ ಮುದಾಯ ಹೆಚ್ಚಿನ ಗಮನಕೊಟ್ಟು ರೋಗವನ್ನು ತಡೆಗಟ್ಟುವಲ್ಲಿ ಗಮನಹರಿಸಬೇಕಾಗಿದೆ. ಸರ್ಕಾರ ಈ ರೋಗಗಳನ್ನು ತಡೆಗಟ್ಟುವಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಉಪನ್ಯಾಸಕ ರಾಜೇಂದ್ರ, ಅರುಣ್‌ಕುಮಾರ್, ಕೀರ್ತಿ, ರೇವಣಪ್ಪ, ಸೌಭಾಗ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net