

ಸುಂಟಿಕೊಪ್ಪ: ದಕ್ಷಿಣ ಕನ್ನಡ ಜಿಲ್ಲೆಯ ಕಳಂಜ ಗ್ರಾಮದ ಬಟಿಯಲ್ಲು ಸೇಂಟ್ ಸೆಬಾಸ್ಟಿನ್ ದೇವಾಲಯಕ್ಕೆ ವರ್ಗಾವಣೆಗೊಂಡ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರು ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್) ಅವರನ್ನು 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರು ಸನ್ಮಾನಿಸಿ ಬೀಳ್ಕೊಟ್ಟರು.
ದೇವಾಲಯದ ಧರ್ಮಗುರುಗಳಾಗಿ 11 ವರ್ಷಗಳಿಂದ ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್) ಸೇವೆ ಸಲ್ಲಿಸುತ್ತಿದ್ದು, 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು.
ದೇವಾಲಯದ ಧರ್ಮಗುರುಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಗ್ರಾಮಸ್ಥರೊಂದಿಗೆ ಉತ್ತಮ ಒಡನಾಟ ಹಾಗೂ ಬಾಂಧವ್ಯವನ್ನು ಹೊಂದಿದ್ದರು. 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್, ಸದಸ್ಯರಾದ ಮುಸ್ತಾಫ, ಸಿದ್ಧಿಕ್,ಮಾಜಿ ಅಧ್ಯಕ್ಷ ರಮೇಶ್, ಸೌಮ್ಯಶ್ರೀ, ಚಂದ್ರಾವತಿ, ಮಾಜಿ ಸದಸ್ಯ ರಮೇಶ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲತಾ ಬಸವರಾಜ್, ಒಕ್ಕೂಟದ ಎಲ್‌ಸಿಆರ್‌ಪಿ ಉಷಾ, 7ನೇ ಹೊಸಕೋಟೆ ಎಸ್.ಎಚ್. ಕನ್ಯಾಸ್ತ್ರೀ ಮಠದ ಮದರ್ ಟೆಸ್ಸಿ ಮ್ಯಾನುವೆಲ್, ಸಿಸ್ಟರ್‌ಗಳಾದ ಸೂಪಿರಿಯರ್ ಲೀಸಾ ಟೋಮ್, ಅ್ಯನ್ಸಿ, ಜಿನ್ಸಿ, ಜುಮ್ಮ ಮಸೀದಿಯ ಅಧ್ಯಕ್ಷ ಉಮ್ಮರ್, 7ನೇ ಹೊಸಕೋಟೆ ಮಹಾಗಣಪತಿ ದೇವಾಲಯದ ಪದಾಧಿಕಾರಿಗಳು ಇದ್ದರು.