ಗದ್ದೆ ಉಳುಮೆ ಮಾಡುತ್ತಿರುವಾಗಲೇ ಹೃದಯಾಘಾತ: ಗದ್ದೆಯಲ್ಲೇ ಟ್ರ್ಯಾಕ್ಟರ್​ ಚಾಲಕ ಸಾವು

New Project(26)
Published on

ಕುಂದಾಪುರ: ಗದ್ದೆ ಉಳುಮೆ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಟ್ರ್ಯಾಕ್ಟರ್ ಚಾಲಕ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ದೀಟಿಯಲ್ಲಿ ಸಂಭವಿಸಿದೆ.

ಹರಿಹರ ಮೂಲದ ರಾಜು ಮೃತ. ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ರಾಜು, ಕರಾವಳಿ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಉಳುಮೆ ಮಾಡಲು ಬಂದಿದ್ದ. ದೀಟಿ ಗ್ರಾಮದ ಗದ್ದೆಯೊಂದರಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದ. ಈ ವೇಳೆ ಎದೆನೋವು ಹೃದಯಾಘಾತ ಸಂಭವಿಸಿದ್ದು, ಟ್ರ್ಯಾಕ್ಟರ್​ನಿಂದ ಕೆಳಗೆ ಬಿದ್ದ ರಾಜು ಗದ್ದೆಯಲ್ಲೇ ಮೃತಪಟ್ಟಿದ್ದಾರೆ.

ಈ ವೇಳೆ ಗದ್ದೆಯಲ್ಲಿ ಯಾರೂ ಇರಲಿಲ್ಲ. ಕೆಲ ಸಮಯದ ಬಳಿಕ ಜಮೀನಿನ ಮಾಲೀಕರು ಬಂದಾಗ ರಾಜು ಗದ್ದೆಯಲ್ಲಿ ಮಕಾಡೆ ಬಿದ್ದಿರುವುದನ್ನ ನೋಡಿ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದರಾದರೂ ರಾಜು ಬದುಕಿರಲಿಲ್ಲ. ರಾಜು ಸಾವಿಗೆ ದೀಟಿ ಭಾಗದ ಜನತೆ ಮರುಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net