ನೋಡುಗರನ್ನು ರಂಜಿಸುವ ಹೆಣದ ಸೋಗಿನ ಬಂಡಿ

A hearse that amuses onlookers
ಗುಳೇದಗುಡ್ಡದಲ್ಲಿ ನಡೆಯುವ ಹೆಣದ ಸೋಗು.
Published on

ಗುಳೇದಗುಡ್ಡ: ನೇಕಾರರ ಪಟ್ಟಣದಲ್ಲಿ ಹೋಳಿ ಹಬ್ಬದಂದು ಹೆಣದ ಸೋಗಿನ ಮೆರವಣಿಗೆ ಮಾಡುವುದು ಒಂದು ವಿಶೇಷ. ಕಾಮನ ದಹನವಾದ ಮರುದಿನ ಅಂದರೆ ರಂಗಿನಾಟದ ದಿನ ಬೆಳಗ್ಗೆಯಿಂದ ಸಂಜೆವರೆಗೆ ಬಣ್ಣದಾಟವಾಡಿ, ನಂತರ ಹೆಣದ ಸೋಗು ಹಾಕಿ ಮೆರವಣಿಗೆ ಮಾಡವುದು ಪಟ್ಟಣದಲ್ಲಿ ಅನೇಕ ವರ್ಷಗಳಿಂದ ನಡೆದು ಬಂದಿದೆ.

ಬೂದಿಯದಿನ ಅಂದರೆ ಬಣ್ಣದ ದಿನ ಸಂಜೆ ಪುರುಷನಿಗೆ ಮಹಿಳೆಯ ವೇಷಹಾಕಿ, ಹೆಣದಂತೆ ಸಿಂಗಾರಮಾಡಿ ಟ್ರಾೃಕ್ಟರ್, ಬಂಡಿಗಳಲ್ಲಿ ಚಟ್ಟಕಟ್ಟಿ ಕೂಡ್ರಿಸಲಾಗುತ್ತದೆ. ಸುತ್ತಲೂ ಮಹಿಳೆಯರಂತೆ ವೇಷತೊಟ್ಟ ಪುರುಷರು ಇರುತ್ತಾರೆ. ಮೆರವಣಿಗೆಯು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದನ್ನು ನೋಡಿದರೆ ಶವಸಂಸ್ಕಾರಕ್ಕೆ ಸಾಗುತ್ತಿರುವಂತೆ ಭಾಸವಾಗುತ್ತದೆ. ಹೆಣದ ವೇಷ ಹಾಕಿದವನ ಪಕ್ಕದಲ್ಲಿರುವ ಮಹಿಳಾ ವೇಷಧಾರಿ ಪುರುಷರು ಅಳುವುದು ಹಾಗೂ ಅಳುತ್ತಲೇ ಹೇಳುವ ಮಾತುಗಳು ಜನರನ್ನು ನಕ್ಕು ನಗಿಸುತ್ತವೆ. ಇದನ್ನು ನೋಡಲು ನಗರ ಸೇರಿ ಪಕ್ಕದ ಊರಿನ ಗ್ರಾಮಸ್ಥರು ರಸ್ತೆಗಳಲ್ಲಿ ಸೇರುತ್ತಾರೆ.

ಪಟ್ಟಣದ ನಗ್ಲಿ ಪೇಟೆ, ಗಚ್ಚಿನಕಟ್ಟಿ, ಕಂಠಿ ಪೇಟೆ, ಸಾಲೇಶ್ವರ ಪೇಟೆ, ರಜಂಗಳ ಪೇಟೆ, ಹರದೊಳ್ಳಿಯಲ್ಲಿನ ವಿವಿಧ ಮೇಳಗಳು ಹೋಳಿಹಬ್ಬದ ಸಂದರ್ಭದಲ್ಲಿ ಹೆಣದ ಸೋಗು ಹಾಕುತ್ತಿದ್ದವು. ಈಗ ಒಂದೆರಡು ಮೇಳಗಳು ಮಾತ್ರ ಈ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿವೆ.

ಗುರುವಾರ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ರಾತ್ರಿ ಕಾಮದಹನ ನಡೆಯಲಿದೆ. ಶುಕ್ರವಾರ ಬಣ್ಣದೋಕುಳಿ ನಡೆಯಲಿದೆ. ಬಣ್ಣದ ಓಕುಳಿ ದಿನದ ಸಂಜೆ 4 ಗಂಟೆಯಿಂದ ಹೆಣದ ಸೋಗಿನ ವೇಷಧಾರಿಗಳು ಸಾರ್ವಜನಿಕರನ್ನು ರಂಜಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net