ಆರೋಗ್ಯವಂತ ಮಹಿಳೆ ಜಗತ್ತನ್ನೆ ಗೆಲ್ಲಬಲ್ಲಳು

27 ckm 2
ಚಿಕ್ಕಮಗಳೂರಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಸರ್ವ ಸದಸ್ಯರ ಸಭೆ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಡಾ. ಡಿ.ಆರ್.ರಮ್ಯಾ ಉದ್ಘಾಟಿಸಿದರು.
Published on

ಚಿಕ್ಕಮಗಳೂರು: ಆರೋಗ್ಯವಂತ ಮಹಿಳೆಯರು ಜಗತ್ತನ್ನೇ ಗೆಲ್ಲಬಹುದು. ಮಹಿಳೆಯರು ಸಂಘ, ಸಂಸ್ಥೆಗಳ ಮೂಲಕ ಉತ್ತಮ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಡಾ. ಡಿ.ಆರ್.ರಮ್ಯಾ ತಿಳಿಸಿದರು.
ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಸರ್ವ ಸದಸ್ಯರ ಸಭೆ ಮತ್ತು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕಮಗಳೂರಿನ ಮಹಿಳೆಯರು ಆಧುನಿಕ ಯುಗದಲ್ಲೂ ಉತ್ತಮ ಸಂಸ್ಕೃತಿ, ಸಂಸ್ಕಾರ ಇಟ್ಟುಕೊಂಡು ಸಂಘ ನಡೆಸುತ್ತಿರುವುದರಿಂದ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳೆಯರು ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ಸಣ್ಣ ಸಮಸ್ಯೆ ಇದ್ದರೂ ವೈದ್ಯರನ್ನು ಕಂಡು ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಸೇವಾ ಭಾವನೆಯಿಂದ ಸಂಘ ಸಂಸ್ಥೆಗಳನ್ನು ಕಟ್ಟುವುದು ಸುಲಭವಲ್ಲ. ಮಹಿಳಾ ಸಂಘವು ಉತ್ತಮವಾಗಿ ಸಮಾಜ ಸೇವೆ ಮಾಡುವ ಜತೆಗೆ ಸಂಘದ ಅಭಿವೃದ್ಧಿಗೆ ಸದಸ್ಯರು ಶ್ರಮಿಸುತ್ತಿದ್ದಾರೆ ಎಂದರು.
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ರಮೇಶ್, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎನ್.ಲಕ್ಷ್ಮಣ್ ಗೌಡ, ಮಹಿಳಾ ಸಂಘದ ಉಪಾಧ್ಯಕ್ಷೆ ಸ್ಮಿತಾ ಸುರೇಶ್, ಗೌರವ ಕಾರ್ಯದರ್ಶಿ ಜಾಹ್ನವಿ ಜಯರಾಮ್, ಸಹ ಕಾರ್ಯದರ್ಶಿ ಶಿಲ್ಪಾ ವಿಜಯ್, ನಿರ್ದೇಶಕರಾದ ಸುಭದ್ರಾ ನಾರಾಯಣ್, ಶಾಲಿನಿ ಸುಬ್ರಹ್ಮಣ್ಯ, ನಾಗರತ್ನ ಜಗದೀಶ್, ಮಂಜುಳಾ ಮಂಜುನಾಥ್ ಗೌಡ, ಕೃಷ್ಣವೇಣಿ ರಮೇಶ್, ಭಾಗ್ಯಾ ಮಹೇಂದ್ರ, ಅಂಜನಾ ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net