ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಅವಶ್ಯ

A health check-up is required once a year
ವಿಜಯಪುರದ ಆಲ್​ ಅಮೀನ್​ ವೈದ್ಯಕಿಯ ಮಹಾ ವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಿದ ಯೂರಾಲಜಿ ವಿಭಾಗದ ಪುರುಷ ಹಾಗೂ ಮಹಿಳೆಯ ವಾರ್ಡ್​ಗಳನ್ನು ಉದ್ಘಾಟಿಸಲಾಯಿತು. ಡಾ. ಮೆಹಬೂಬ್​ ಕಲಬುರ್ಗಿ, ಡಾ. ಸುರೇಶ ಕಾಗಲಕರ, ಡಾ. ನಿಶಿಕಾಂತ ಗುಜ್ಜರ ಮತ್ತಿತರರಿದ್ದಾರೆ.
Published on

ವಿಜಯಪುರ: ಜನರು ವರ್ಷಕೊಮ್ಮೆಯಾದರೂ ರಕ್ತದೊತ್ತಡ, ಮಧುಮೇಹ ಮತ್ತು ರಕ್ತದ ಕ್ರಿಯಾಟಿನೈನ್​ ಪರೀೆ ಮಾಡುವುದರಿಂದ ಮೂತ್ರಪಿಂಡ ವೈಫಲ್ಯಗಳನ್ನು ಶ್ರೀವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಡಾ. ಬಿ.ಎಸ್​. ಪಾಟೀಲ ತಿಳಿಸಿದರು.

ನಗರದ ಆಲ್​ ಅಮೀನ್​ ವೈದ್ಯಕಿಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಕಿಡ್ನಿ ಕಸಿಯ ಮಹತ್ವದ ಕುರಿತು ಮತ್ತು ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಣಿಪಾಲ್​ ಆಸ್ಪತ್ರೆಯ ನುರಿತ ವೈದ್ಯ, ಕಿಡ್ನಿ ಕಸಿ ತಜ್ಞ ಡಾ. ಅವಿನಾಶ ಓದುಗೌಡರ ಮಾತನಾಡಿ, ಕಿಡ್ನಿ ಮಹತ್ವ ಹಾಗೂ ಜನರಿಗೆ ಇರುವ ಮೂಢನಂಬಿಕೆ, ತಪ್ಪು ತಿಳಿವಳಿಕೆ ಬಗ್ಗೆ ವಿವರಣೆ ನೀಡಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಮೆಹಬೂಬ್​ ಕಲಬುರ್ಗಿ ನೂತನವಾಗಿ ನಿರ್ಮಿಸಿದ ಯೂರಾಲಜಿ ವಿಭಾಗದ ಪುರುಷ ಹಾಗೂ ಮಹಿಳೆಯ ವಾರ್ಡ್​ಗಳನ್ನು ಉದ್ಘಾಟಿಸಿದರು. ಆಸ್ಪತ್ರೆ ಅಧ್ಯಕ್ಷ ಡಾ. ಜಿಲಾನಿ ಅವಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸರ್ಜರಿ ವಿಭಾಗದ ಮುಖ್ಯಸ್ಥೆ ಡಾ. ಸಾಜಿದ್​ ಮುಧೋಳ, ಡಾ. ನಿಶಿಕಾಂತ ಗುಜ್ಜರ, ಡಾ. ಸುರೇಂದ್ರ ಅಗರ್ವಾಲ, ಡಾ. ಯುನಿಸ್​ ಖಾದ್ರಿ, ಆಫ್ರಿನ್​ ಜಮಾದಾರ್​, ಯುರೋಲಜಿ ವಿಭಾಗದ ಮುಖ್ಯಸ್ಥ ಡಾ. ಸುರೇಶ ಕಾಗಲಕರ, ಡಾ. ಅಶೋಕ ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net