ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ಬರುತ್ತೆ: ಎಚ್​.ಡಿ.ದೇವೇಗೌಡ ಭವಿಷ್ಯ

H D Devegowda 1
Published on

ಮಂಗಳೂರು: ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ಬರುತ್ತೆ. ಸರ್ಕಾರ ರಚನೆ ಸಂದರ್ಭ ನೆರವು ಕೋರಿದರೆ, ಜಾತ್ಯತಿತ ಪಕ್ಷಕ್ಕೇ ನಮ್ಮ ಆದ್ಯತೆ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಹೇಳಿದರು.

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ 120ರಿಂದ 150 ಸ್ಥಾನ ಬರುತ್ತದೆ ಎಂದು ರಾಷ್ಟ್ರೀಯ ಪಕ್ಷಗಳ ಮುಖಂಡರು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ 2023ರ ಚುನಾವಣೆಯಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರವೇ ಬರಲಿದೆ ಎಂದು ದೇವೇಗೌಡ ಭವಿಷ್ಯ ನುಡಿದರು.

ಸರ್ಕಾರ ರಚನೆ ಸಂದರ್ಭ ನೆರವು ಕೋರಿದರೆ, ಜಾತ್ಯತಿತ ಪಕ್ಷಕ್ಕೇ ನಮ್ಮ ಆದ್ಯತೆ. ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಗೆಲ್ಲಲು ಮೋದಿ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಾದೇಶಿಕ ಪಕ್ಷಗಳು ಪ್ರಬಲ ಸ್ಪರ್ಧೆ ನೀಡುತ್ತಿವೆ. ಪ್ರಾದೇಶಿಕ ಪಕ್ಷಗಳನ್ನು ಬಿಟ್ಟು ದೇಶ ಆಳುವುದು ಕಷ್ಟ. ಪಂಚರಾಜ್ಯ ಚುನಾವಣೆ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ಗೋಚರಿಸಲಿದೆ ಎಂದು ದೇವೇಗೌಡರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net