21 ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದವ ಲಾಕ್​ಡೌನ್​ನಿಂದಾಗಿ ಮರಳಿ ತಂದೆ-ತಾಯಿ ಬಳಿ!

hasana maga
Published on

ಹಾಸನ: ಕರೊನಾ ಮಹಾಮಾರಿಂದಾಗಿರುವ ಲಾಕ್​ಡೌನ್​ ಕೆಲವು ಕಡೆ ಮನೆ ಸದಸ್ಯರನ್ನ ಶಾಶ್ವತವಾಗಿ ದೂರ ಮಾಡಿದ್ರೆ, ಹಾಸನ ಜಿಲ್ಲೆಯ ಹೊಂಗೆರೆ ಗ್ರಾಮದಲ್ಲಿ 21 ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ಮನೆಯ ಹಿರಿ ಮಗ ತಿರುಗಿ ಮನೆಗೆ ಮರಳುವಂತೆ ಮಾಡಿದೆ.

ಹೌದು, ಹೊಂಗೆರೆ ಗ್ರಾಮದ ರಾಜೇಗೌಡ ಅಕ್ಕಯ್ಯಮ್ಮ ದಂಪತಿಯ ಹಿರಿಯ ಪುತ್ರನಾದ ಶೇಖರ್ (37) ಈಗ 21 ವರ್ಷದ ನಂತರ ಮನೆಗೆ ಮರಳಿರುವ ವ್ಯಕ್ತಿ.

ಗ್ರಾಮದಲ್ಲಿ 7 ನೇ ತರಗತಿವರೆಗೂ ಚನ್ನಾಗಿಯೇ ಓದಿಕೊಂಡಿದ್ದ ಶೇಖರ್ 16ನೇ ವಯ್ಯಸ್ಸಿನಲ್ಲಿ ಇದ್ದಕಿಂದ್ದಂತೆ ಮನೆ ತೊರೆದು ಹೋಗಿದ್ದರು. ಮಗ ಹೋದ ಮೇಲೆ ಈ ದಂಪಂತಿ ಕಣ್ಣೀರು ಹಾಕಿದ್ದರು. ಊರಿನವರು ಶೇಖರ್ ಜೀವಂತ ಬದುಕಿಲ್ಲ ಅಂತೆಲ್ಲಾ ಮಾತ್ನಾಡಿಕೊಂಡಿದ್ದರು.

ಆದ್ರೆ, ಶೇಖರ್ ಈಗ ಧೀಡೀರ್ ಅಂತ ಮಂಗಳವಾರ ರಾತ್ರಿ ಮನೆಗೆ ವಪಾಸ್ ಆಗಿದ್ದಾರೆ. ಇಳಿ ವಯ್ಯಸ್ಸಿನಲ್ಲಾದ್ರು ಮಗ ಬಂದನಲ್ಲ ಅಂತ ಶೇಖರ್ ತಾಯಿ ಖುಷಿ ಪಟ್ಟಿದ್ದಾರೆ. ಕರೋನಾ ಲಾಕ್ ಡೌನ್ ಹಾಗೂ ನಮ್ಮೂರೆ ನನಗೆ ಲೇಸು ಎಂದು ಅರಿವಾದ ಮೇಲೆ ಹಾಗೂ ಅನೇಕ ಕಷ್ಟಬಂದ ಮೇಲೆ ಮನಸ್ಸಿಗೆ ನೋವಾಗಿ ವಾಪಾಸ್ ಬಂದಿರೋದಾಗಿ ಶೇಖರ್ ಹೇಳಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್, ಹಾಸನ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net