

ಚಿಕ್ಕಮಗಳೂರು: ಪರಸ್ಪರ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಆದರ್ಶ ನಗರದಲ್ಲಿ ಎಲ್ಲ ವರ್ಗದ ಸಹಕಾರದಿಂದ ಗಣಪತಿ ಮಹೋತ್ಸವ ಆಚರಿಸುವ ಮೂಲಕ ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ತಿಳಿಸಿದರು.
ಆದರ್ಶನಗರದಲ್ಲಿ ಹದಿನಾರನೇ ವರ್ಷದ ಶ್ರೀ ಆದರ್ಶ ಗಣಪತಿ ಸೇವಾ ಸಮಿತಿಯಿಂದ ಶ್ರೀ ಗಣಪತಿ ಪ್ರತಿಷ್ಟಾಪಿಸಿದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಆದರ್ಶ ನಗರ ಹೆಸರೇ ಆದರ್ಶದಿಂದ ಕೂಡಿದೆ. ಈ ವಾರ್ಡಿನ ಸುತ್ತಮುತ್ತಲು ವಿವಿಧ ಧರ್ಮದವರಿದ್ದಾರೆ. ಆದರೆ ಗಣಪತಿ ಪ್ರತಿಷ್ಟಾಪನಾ ವೇಳೆಯಲ್ಲಿ ಎಲ್ಲರೂ ಒಂದಾಗಿ ಮನೆ ಹಬ್ಬದಂತೆ ಗಣಪತಿ ಹಬ್ಬ ಆಚರಣೆಗೆ ಮುಂದಾಗುತ್ತಿರುವುದು ಪ್ರತಿಯೊಬ್ಬರಿಗೂ ಪ್ರೇರಣಾದಾಯಕವಾಗಿದೆ ಎಂದರು.
ಬಿಜೆಪಿ ನಗರ ಓಬಿಸಿ ಮೋರ್ಚಾ ಅಧ್ಯಕ್ಷ ಸಿ.ಟಿ.ಜಯವರ್ಧನ್ ಮಾತನಾಡಿ, ಗಣೇಶೋತ್ಸವ ಎಂಬುದು ಅತ್ಯಂತ ಪವಿತ್ರ ಹಬ್ಬವಾಗಿದೆ. ಶಿಸ್ತು ಹಾಗೂ ಶ್ರದ್ದಾಭಕ್ತಿಯಿಂದ ಹಬ್ಬ ಕೂಡಿರಬೇಕು. ಅದರಂತೆ ವಾರ್ಡಿನ ನಿವಾಸಿಗಳು ಆರಂಭದಿAದ ಕೊನೆಯ ದಿನದತನಕ ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರ ರಾಗಿರುವುದು ಹೆಮ್ಮೆ ಎಂದು ಹೇಳಿದರು.
ಗಣಪತಿ ಸೇವಾ ಸಮಿತಿ ಮುಖ್ಯಸ್ಥ ಎಂ.ಜಿ.ಬಸವರಾಜ್ ಮಾತನಾಡಿ, ಒಂದೂವರೆ ದಶಕದಿಂದ ಪ್ರಾರಂಭವಾದ ಗಣಪತಿ ಮಹೋತ್ಸವ ಇಂದು ಅನೇಕ ದಾನಿಗಳ ಹಾಗೂ ವಾರ್ಡಿನ ನಿವಾಸಿಗಳ ಸಹಕಾರದಿಂದ ಒಂದು ವಾರಗಳ ಕಾಲ ದೊಡ್ಡಮಟ್ಟದಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಲಕ್ಷö್ಮಣಗೌಡ, ಕಾಫಿ ಬೆಳೆಗಾರ ಎಂಸAಧಿ ಸುನೀಲ್, ವಾರ್ಡಿನ ನಿವಾಸಿಗಳಾದ ಮಹಾಬಲರಾಯ್, ಎಂ.ಜಿ.ನಾಗೇಶ್, ಪುಟ್ಟಣ್ಣ, ತಮ್ಮಣ್ಣಗೌಡ, ಶಂಕರ್, ಜೇಮ್ಸ್ ಡಿಸೋಜ, ಸೋಮೇಗೌಡ, ಡಿ.ಬಿ.ಕಾಂತೇಶ್, ಸಂತೋಷ್, ಮಂಜು, ಗುರು, ಶಶಿ ಉಪಸ್ಥಿತರಿದ್ದರು.