

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಗ್ರಾಮದಲ್ಲಿ ಕುರಿಗಾಹಿ ಬಾಲಕನನ್ನು ವ್ಯಕ್ತಿಯೊಬ್ಬ ಮರಕ್ಕೆ ಕಟ್ಟಿ ಅಮಾನವೀಯವಾಗಿ ನಡೆದುಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ.
ಕೆಆರ್ಎಸ್ ಬಳಿಯ ಜಮೀನೊಂದಕ್ಕೆ ಬಾಲಕನ ಕುರಿಗಳು ಹೋಗಿದ್ದವು. ಇದಕ್ಕೆ ಸಿಟ್ಟಾದ ಆ ಜಮೀನು ಮಾಲೀಕ ಹರ್ಷ ಎಂಬಾತ ಬಾಲಕನನ್ನು ಮರಕ್ಕೆ ಕಟ್ಟಿಹಾಕಿದ್ದ.
ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿರುವುದನ್ನು ಕಂಡು ನೆರವಿಗೆ ಬಂದ ಸ್ಥಳೀಯರು, ಕಟ್ಟು ಬಿಚ್ಚಿದ್ದರು. ಮತ್ತೆ ಅವನ ಮೇಲೆ ದಬ್ಬಾಳಿಕೆ ಮಾಡಿದ ಜಮೀನು ಮಾಲೀಕ, ಕುರಿಗಾಹಿ ಬಾಲಕನನ್ನು ಕರೆದೊಯ್ದಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕನನ್ನು ರಕ್ಷಿಸಿದರು. ಆರೋಪಿ ವಿರುದ್ಧ ಕೆಆರ್ಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಟೇಷನ್ ಬೇಲ್ ಬಿಡುಗಡೆಯಾಗಿದ್ದಾನೆ.