ಆರೋಗ್ಯದಿಂದ ಇದ್ದರೆ ನೆಮ್ಮದಿ ಬದುಕು ಸಾಧ್ಯ

04--kkr1(10-25
Published on

ಕಿಕ್ಕೇರಿ: ಆರೋಗ್ಯಕರ ಜೀವನಶೈಲಿಯೇ ಆರೋಗ್ಯದ ಗುಟ್ಟು. ಇದನ್ನು ಅರಿತರೆ ನೆಮ್ಮದಿ ಬದುಕು ಕಾಣಬಹುದಾಗಿದೆ ಎಂದು ಪಿಡಿಒ ವಿ.ಎಂ.ರವಿಕುಮಾರ್ ತಿಳಿಸಿದರು.ಹೋಬಳಿಯ ಆನೆಗೊಳ ಗ್ರಾಪಂ.ನಲ್ಲಿ ಇತ್ತೀಚೆಗೆ ಕೂಲಿ ಕಾರ್ಮಿಕರಿಗಾಗಿ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ನರೇಗಾ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಜಾಬ್ ಕಾರ್ಡ್ ಹೊಂದಿರುವ ಫಲಾನುಭವಿಗಳ ಆರೋಗ್ಯ ತಪಾಸಣೆಗಾಗಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಕಷ್ಟ ಪಡುವ ಶ್ರಮಿಕ ವರ್ಗದವರ ಆರೋಗ್ಯ ಕಾಪಾಡುವುದು ಇಲಾಖೆ ಕರ್ತವ್ಯವಾಗಿದೆ ಎಂದರು.ಆರೋಗ್ಯಕರ, ಆರ್ಥಿಕ ಸ್ಥಿರತೆ ಸಮಾಜ ಕಾರ್ಮಿಕರಿಂದ ಸಾಧ್ಯ. ಇವರಿಗೆ ಕೆಲಸ ಕೊಡುವಷ್ಟೆ ಆರೋಗ್ಯವನ್ನು ನೋಡಿಕೊಳ್ಳಬೇಕಿದೆ. ಆರೋಗ್ಯವಾಗಿ ಬದುಕಿದ್ದರೆ ಕೆಲಸ ಮಾಡಲು ಸಾಧ್ಯ. ಇದನ್ನು ಅರಿತು ಕಾರ್ಮಿಕರು ಶಿಬಿರದ ಸದುಪಯೋಗಪಡಿಸಿಕೊಳ್ಳಿ ಎಂದರು. ಅರ್ಹ 50 ಫಲಾನುಭವಿಗಳಿಗೆ ಉಚಿತವಾಗಿ ಬಿಪಿ, ಮಧುಮೇಹ, ರಕ್ತ ಪರೀಕ್ಷೆ ಮಾಡಲಾಯಿತು. ಡಾ.ಪ್ರಸಾದ್, ಡಿ.ಕೆ.ನವೀನ್, ಪೂಜಾ, ವೀಣಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net