ಮಹಿಳೆಯರಿಗೆ ಶಕ್ತಿ ತುಂಬುತ್ತಿರುವ ಕೈ

15 07 2025_BGR_RURAL-PAGE_5B
ನೆಲಮಂಗಲದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಶಕ್ತಿ ಯೋಜನೆ ಸಂಭ್ರಮಕ್ಕೆ ಸಿಹಿ ವಿತರಿಸಿ ಸಂಭ್ರಮಿಸಿದರು. ಸಮಿತಿ ಅಧ್ಯೆ ನಾಗರತ್ನಮ್ಮ, ನೆ.ಯೋ.ಪ್ರಾಧಿಕಾರ ಎಂ.ನಾರಾಯಣ್​ಗೌಡ, ನಗರಸಭೆ ಉಪಾಧ್ಯಕ್ಷ ಆನಂದ್​, ಸ್ಥಾಯಿ ಸಮಿತಿ ಪದ್ಮನಾಬ್​ ಇದ್ದರು.
Published on

ನೆಲಮಂಗಲ : ಮಹಿಳೆಯರಿಗೆ ಪ್ರತಿಯೊಂದು ೇತ್ರದಲ್ಲೂ ಕಾಂಗ್ರೆಸ್​ ಶಕ್ತಿ ತುಂಬುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯೆ ಎಚ್​.ನಾಗರತ್ನಮ್ಮ ತಿಳಿಸಿದರು. ನಗರದ ಬಸ್​ ನಿಲ್ದಾಣ ಬಳಿ ಆಯೋಜಿಸಿದ್ದ ಸ್ತ್ರೀ ಸ್ವಾವಲಂಬಿ ದಿನಾಚರಣೆಯಲ್ಲಿ ಸಿಹಿ ವಿತರಿಸಿ ಮಾತನಾಡಿದರು. ಕಾಂಗ್ರೆಸ್​ ಎಲ್ಲ ವರ್ಗದ ಜನರಿಗೆ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಜತೆಗೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರುವ ಮೂಲಕ ನುಡಿದಂತೆ ನಡೆದುಕೊಂಡಿದೆ. ಎರಡೂವರೆ ವರ್ಷದಲ್ಲಿ ಶಕ್ತಿ ಯೋಜನೆಯಡಿ ಇದುವರೆಗೆ ರಾಜ್ಯಾದ್ಯಂತ ಮಹಿಳೆಯರು 500 ಕೋಟಿ ಬಾರಿ ಬಸ್​ನಲ್ಲಿ ಸಂಚರಿಸಿದ್ದಾರೆ. ಇದು ದೇಶದಲ್ಲಿಯೇ ದೊಡ್ಡ ದಾಖಲೆ. ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ತಾಲೂಕಿನಲ್ಲಿ 1.20ಕೋಟಿ ಬಾರಿ ಮಹಿಳೆಯರು ಸಂಚಾರ ಮಾಡಿದ್ದು ದಾಖಲಾಗಿದೆ ಎಂದರು.

ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಟಿ.ನಾಗರಾಜು ಮಾತನಾಡಿ, ಮಹಾತ್ಮಗಾಂಧಿ ಆಶಯದಂತೆ ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಕಾಂಗ್ರೆಸ್​ ಅನುವು ಮಾಡಿಕೊಟ್ಟಿತು. ರಾಜ್ಯ ಸರ್ಕಾರ ವಿಶೇಷವಾಗಿ ಬಡವರ ಪರವಾಗಿ ಬಹುತೇಕ ಯೋಜನೆ ಜಾರಿಗೊಳಿಸಿದೆ. ಅದ್ದರಂತೆ ಶಾಸಕ ಎನ್​.ಶ್ರೀನಿವಾಸ್​ ಅವರು ೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದರು.

ದೇವರ ದರ್ಶನ : ನಗರದ ಬಸ್​ ನಿಲ್ದಾಣದಲ್ಲಿ ಬಸ್​ಗೆ ವಿಶೇಷ ಪೂಜೆ ಸಲ್ಲಿಸಿ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ನಗರದ ಸೊಂಡೇಕೊಪ್ಪ ಮುಖ್ಯರಸ್ತೆಯಲ್ಲಿರುವ ಬಯಲು ಉದ್ಭವ ಶ್ರೀ ವಿನಾಯಕ ಸ್ವಾಮಿ ದರ್ಶನ ಪಡೆದುಕೊಂಡರು. ನಿಟಕಪೂರ್ವ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಸದಸ್ಯ ಪ್ರದಿಪ್​, ನರಸಿಂಹಮೂರ್ತಿ, ಲೋಲಾಗಂಗಾಧರ್​, ಪುರುಷೋತ್ತಮ್​, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲಿಟರಿ ಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ನರಸಿಂಹರಾಜು, ಟಕ ವ್ಯವಸ್ಥಾಪಕ ರಾಮಕೃಷ್ಣರೆಡ್ಡಿ, ಸಹಾಯಕ ಸಂಚಾರ ಅಧೀಕ್ಷಕ ಲ್ಮಗೌಡ, ಸಂಚಾರ ನಿರೀಕ್ಷಕ ಗಂಗಾಧರ್​, ಮುಖಂಡ ಬಿನ್ನಮಂಗಲ ವೆಂಕಟೇಶ್​, ನಾಗರಾಜು, ರಮೇಶ್​, ಲಕ್ಷ$್ಮಮ್ಮ ಮುನಿರಾಜು, ಹನುಮಂತಮ್ಮ, ರುಕ್ಮಿಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net