ಕೀಳು ಮನಸ್ಥಿತಿಗೆ ಹಿಡಿದ ಕೈಗನ್ನಡಿ

Mahesh Tenginakayi
Published on

ಹುಬ್ಬಳ್ಳಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್)ವನ್ನು ತಾಲಿಬಾನ್​ಗೆ ಹೋಲಿಸಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ನೀಡಿರುವ ಹೇಳಿಕೆ ಅವರ ಕೀಳುಮಟ್ಟದ ಮನಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಟೀಕಿಸಿದ್ದಾರೆ.

ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಆರ್​ಎಸ್​ಎಸ್ ಅನ್ನು ಹೊಗಳಿದ್ದರು. ದೇಶದ ಯಾವುದೇ ರಾಜ್ಯಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಅಲ್ಲಿ ತಕ್ಷಣ ನೆರವಿಗೆ ಬಂದು ನಿಲ್ಲುವುದು ಆರ್​ಎಸ್​ಎಸ್ ಸಂಘಟನೆ ಎಂದು ಈ ಹಿಂದೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ಮಾತು ಹರಿಪ್ರಸಾದ್ ಅವರಿಗೆ ಅರಿವಿಲ್ಲವೇ ಎಂದು ಶಾಸಕ ಟೆಂಗಿನಕಾಯಿ ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತವಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಶಾಖೆ ಹೊಂದಿದೆ. ಸಂಘವು ದೇಶಭಕ್ತ ಸಂಘಟನೆ. ಸಂಘವು ಇತ್ತೀಚೆಗೆ ಯಶಸ್ವಿ ನೂರು ವರ್ಷ ಪೂರೈಸಿದೆ. ಒಂದು ಬಾರಿ ಹರಿಪ್ರಸಾದ ಅವರು ಸಂಘದ ಕಾರ್ಯುಲಯ ಮತ್ತು ಶಾಖೆಗೆ ಭೇಟಿ ನೀಡಬೇಕು. ಅಲ್ಲಿ ನೀಡುವ ಶಿಕ್ಷಣದಿಂದ ಕಾಂಗ್ರೆಸ್ ಪಕ್ಷವು ಬಹಳಷ್ಟು ಕಲಿಯಬೇಕಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net