ರಬಕವಿಯಲ್ಲಿ ಸಂಭ್ರಮದ ಹಾಲೋಕುಳಿ

A halo of celebration in Rabakavi
ರಬಕವಿ ಶಂಕರಲಿಂಗ ಸರ್ಕಲ್‌ದಲ್ಲಿ ಹನುಮಾನ ಜಾತ್ರೆ ನಿಮಿತ್ತ ಹಾಲೋಕುಳಿ ಜಾತ್ರೆಯಲ್ಲಿ ಹಾಲಗಂಬ ಏರುತ್ತಿರುವ ಯುವಕರು.
Published on

ರಬಕವಿ/ಬನಹಟ್ಟಿ: ರಬಕವಿ ನಗರದ ಹನುಮಾನ ದೇವರ ಜಾತ್ರೆ ನಿಮಿತ್ತ ಜಾನಪದ ಸೊಗಡಿನ ಪರಂಪರೆ ಬಿಂಬಿಸುವ ಸಂಭ್ರಮದ ಹಾಲೋಕುಳಿ ಜರುಗಿತು.

ಸಂಪ್ರದಾಯದ ತಳಹದಿಯಲ್ಲಿರುವ ಹಳ್ಳಿಯ ಸೊಗಡು ಬಿಂಬಿಸುವ ಹಾಲೋಕುಳಿ ಕ್ರೀಡೆ ಅನೇಕ ಕಡೆಗಳಲ್ಲಿ ಇಂದಿಗೂ ಜೀವಂತವಾಗಿದೆ. ಈ ಬಾರಿ ರಬಕವಿ ನಗರದಲ್ಲಿ ಆರ್ಥಿಕವಾಗಿ ನೇಕಾರ ಸಮುದಾಯ ಸಂಕಷ್ಟದಲ್ಲಿದ್ದರೂ ಖುಷಿಯಿಂದ ಈ ಬಾರಿ ಜಾತ್ರೆಗೆ ಅತಿ ಹೆಚ್ಚು ಜನ ಸೇರಿ ಸಂಭ್ರಮದಿಂದ ಆಚರಿಸಿದರು.

ನಗರದ ತುಗಲಿ ಲಕ್ಕವ್ವದೇವಿ ದೇವಸ್ಥಾನದ ತಂಡ ಮತ್ತು ರಬಕವಿಯ ಗಟ್ಟಗಿ ಬಸವೇಶ್ವರ ತಂಡ ನಿಗದಿತ ಸಮಯದೊಳಗೆ ಕಂಬ ಏರಿದ್ದರಿಂದ ಎರಡೂ ತಂಡದ ಮುಖಂಡರಾದ ಲಕ್ಕಪ್ಪ ಪಾಟೀಲ, ವಿಶ್ವನಾಥ ಮಠ, ನಿಂಗಪ್ಪ ಪೂಜಾರ ಅವರನ್ನು ಸನ್ಮಾನಿಸಲಾಯಿತು.

ಬಾಲಚಂದ್ರ ಉಮದಿ, ಬಸವರಾಜ ದಲಾಲ, ಈಶ್ವರ ನಾಗರಾಳ, ಸಂಜು ತೆಗ್ಗಿ, ಮಾರುತಿ ನಾಯಕ, ಎಂ.ಎಸ್. ಬಾದಾಮಿ, ಶಿವಾನಂದ ಸಿದ್ದಗಿರಿ, ಶಿವಾನಂದ ಮಠದ, ಶಿವಾನಂದ ಕಡಕೋಳ, ಸುರೇಶ ಪಾಟೀಲ, ವಿನೋದ ನಾಯಿಕ, ಡಾ. ರವಿ ಜಮಖಂಡಿ, ಸಂಜು ತೇಲಿ, ಪ್ರವೀಣ ಹಜಾರೆ, ಆನಂದ ಜುಗಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net