ತಲೆ ಕೂದಲು ಉದುರಿದ್ದಕ್ಕೆ ಬೇಸತ್ತು ಮೈಸೂರಲ್ಲಿ ಯುವತಿ ಆತ್ಮಹತ್ಯೆ! ಬಾಳಿ ಬದುಕಬೇಕಿದ್ದವಳ ಬಾಳಿಗೆ ಕೊಳ್ಳಿ ಇಟ್ಟ ಪತ್ಮಂಡೆ

death
Published on

ಮೈಸೂರು: ತಲೆ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದ 22 ವರ್ಷ ಯುವತಿಯೊಬ್ಬಳು ಬೇಸತ್ತು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ರಾಘವೇಂದ್ರ ನಗರ ಬಡಾವಣೆಯಲ್ಲಿ ಸಂಭವಿಸಿದೆ.

ಕಾವ್ಯಶ್ರೀ(22) ಮೃತ ದುರ್ದೈವಿ. ಕಾವ್ಯಶ್ರೀಗೆ ಹಲವು ದಿನಗಳ ಹಿಂದೆ ಪತ್ಮಂಡೆ(ಕೂದಲು ಉದುರುವಿಕೆ) ಸಮಸ್ಯೆ ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆದರೂ ಸಮಸ್ಯೆ ಬಗೆಹರಿದಿರಲಿಲ್ಲ. ತಲೆಯಲ್ಲಿ ಬಹುತೇಕ ಎಲ್ಲ ಕೂದಲೂ ಉದುರಿತ್ತು.

ಈ ವಿಚಾರಕ್ಕೆ ಬಹಳ ನೊಂದುಕೊಂಡಿದ್ದ ಕಾವ್ಯಶ್ರೀ, ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net