

ಬೆಳಗಾವಿ: ಗುರುಗಳು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದಲ್ಲದೇ ಜೀವನದಲ್ಲಿ ನೆಲೆ ನಿಲ್ಲುವುದನ್ನು ಹೇಳಿಕೊಡುತ್ತಾರೆ. ಶಿಕ್ಷಕರ ಕಾರ್ಯ ಅಭಿನಂದನಾರ್ಹ ಎಂದು ಉಪನ್ಯಾಸಕ ಎಂ.ಎನ್. ಹಳ್ಳಿಕೇರಿ ಹೇಳಿದರು.
2001-02ನೇ ಸಾಲಿನ ಕೆಎಲ್ಇ ಸಂಸ್ಥೆಯ ಜಿ.ಎ.ಸಂಯುಕ್ತ ಮಹಾವಿದ್ಯಾಲಯದ ಪಿಯುಸಿ ಕಾಲೇಜಿನ ಹಳೇ ವಿದ್ಯಾರ್ಥಿಗಳಿಂದ ಬೆಳಗಾವಿ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಶಿಕರನ್ನು ನೆನೆದು ಹಳೇ ವಿದ್ಯಾರ್ಥಿಗಳು ಗುರುವಂದನೆ ಆಯೋಜಿಸುತ್ತಿರುವುದು ಶ್ಲಾನೀಯ ಎಂದರು.
ನಿವೃತ್ತ ಶಿಕ ಡಿ.ಬಿ.ಕೋಳಿ, ಎಸ್.ಎಸ್.ಬಿಂಜವಾಡಗಿ, ಸೋಮಶೇಖರ ಖೋದನ್ನವರ, ಎಂ.ಆರ್. ಶಿವನಾಯ್ಕರ, ಎಸ್.ಎನ್.ಮಡಿವಾಳರ, ಎಂ.ವಿ.ಸಿಂದಗಿ ಮಾತನಾಡಿದರು. ಸಿ.ಕೆ.ಉಣಕಲ್ ಅಧ್ಯತೆ ವಹಿಸಿದ್ದರು. ಸಿದ್ದಪ್ಪ ಇಟಗಿ ಗುರುಗಳ ತೈಲವರ್ಣ ಚಿತ್ರ ರಚಿಸಿ ಒಪ್ಪಿಸಿದರು. ವಸತಿ ಸಚಿವರ ಕಾರ್ಯದರ್ಶಿ ಹಸನ ತಹಸೀಲ್ದಾರ್, ಪ್ರಸ್ತುತ ಜಿ.ಎ.ಕಾಲೇಜಿನ ಪ್ರಾಚಾರ್ಯ ಆರ್.ಎಸ್. ಪಾಟೀಲ ಇದ್ದರು. ಶಿವಕುಮಾರ ಹಿರೇಮಠ, ಸಂಗೀತ ಕುಡಚಿ, ಸಂತೋಷ ಹಿರೇಮಠ ಗುರುಗಳ ಪಾದಪೂಜೆ ನೆರವೇರಿಸಿದರು.
ಪುಷ್ಪಲತಾ ಯಡ್ರಾವಿ, ಆಶಾ ಹಾವನವರ, ಲಕ್ಷ$್ಮಣ ಡೊಂಬರ, ಮಹಾಂತೇಶ ಪಡಿ ಪಾಟೀಲ ಅನಿಸಿಕೆ ವ್ಯಕ್ತಪಡಿಸಿದರು. ಜಯಶ್ರೀ ವಾಲಿಶೆಟ್ಟಿ, ಈರಮ್ಮ ಬಾಗೇವಾಡಿ ನಿರೂಪಿಸಿದರು. ರುದ್ರಪ್ಪ ಕುರ್ಲಿ ಸ್ವಾಗತಿಸಿದರು. ಬಾಳಪ್ಪ ಮಕಾಟೆ ವಂದಿಸಿದರು.