ಉತ್ತಮ ಬದುಕಿಗೆ ಗುರು ಅವಶ್ಯ

FotoJet (3)
Published on

ಗೊಲ್ಲಹಳ್ಳಿ ಮಠದ ಶ್ರೀ ವಿಭವ ಶಂಕರ ದೇಶೀಕೇಂದ್ರ ಸ್ವಾಮಿಜಿ ಹೇಳಿಕೆ |

 ಚೇಳೂರು: ಇಡೀ ಜಗತ್ತಿನಲ್ಲಿ ಗುರುಗಳಿಗಿಂತ ಶ್ರೇಷ್ಠವಾದದ್ದು ಯಾರು ಇಲ್ಲ. ಗುರುಗಳ ಆಶೀರ್ವಾದದಿಂದ ನಾವೆಲ್ಲರೂ ದೊಡ್ಡಮಟ್ಟಕ್ಕೆ ಬೆಳೆದಿದೇವೆ ಎಂದು ಗೊಲ್ಲಹಳ್ಳಿ ಮಠದ ಶ್ರೀ ವಿಭವ ಶಂಕರ ದೇಶೀಕೇಂದ್ರ ಸ್ವಾಮಿಗಳು ತಿಳಿಸಿದರು.

ಗುಬ್ಬಿ ತಾಲೂಕಿನ ಕಚ್ಚೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಹಳೆ ವಿದ್ಯಾರ್ಥಿಗಳಿಗೆ ಸ್ನೇಹಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾನು ಕೂಡ ಗ್ರಾಮೀಣ ಪ್ರದೇಶದಲ್ಲಿ ಓದಿ ಇವತ್ತು 8 ಭಾಷೆಗಳಲ್ಲಿ ಮಾತನಾಡುತ್ರೇನೆ. ವಿದ್ಯಾರ್ಥಿಗಳು ಮನಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಪಾಲಕರು ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸಬೇಕು. ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಲು ಅದು ಪಾಲಕರ ಸಹಕಾರ ಅಗತ್ಯ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ಬಂದಿದೆ. ನಾವೆಲ್ಲರೂ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿದರೆ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯವಾಗುತ್ತದೆ. ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಶಿಕ್ಷಕಿ ಪದ್ಮಾ ಮಾತನಾಡಿ, ನನ್ನ ಕೈ ಕೆಳಗೆ ಓದಿದ ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಂಡು ಉನ್ನತ ಮಟ್ಟದಲ್ಲಿ ಇದ್ದಾರೆ. ನನ್ನಗೆ ತೃಪ್ತಿ ಇದೆ. ನನ್ನ ಎಲ್ಲ ಹಳೆ ವಿದ್ಯಾರ್ಥಿಗಳು ನನಗೆ ಸಂಪೂರ್ಣ ಬೆಂಬಲ ಕೊಟ್ಟು ಶಾಲೆಯಲ್ಲಿ ಉತ್ತಮ ಕೆಲಸ ಮಾಡಲು ಕಾರಣರಾಗಿದ್ದಾರೆ ಎಂದರು.

ಶಿಕ್ಷಕ ಸಿದ್ದಲಿಂಗಯ್ಯ ಮಾತನಾಡಿ, ಕಚ್ಚೇನಹಳ್ಳಿ ವಿದ್ಯವಂತರನ್ನ ಹಾಗೂ ಬುದ್ಧಿವಂತರನ್ನ ಹೊಂದಿರುವ ಗ್ರಾಮ. ಎಲ್ಲ ಗರುಗಳನ್ನು ಒಂದೆಡೆ ಸೇರಿಸಿ ಗುರುವಂದನಾ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ವಿದ್ಯೆ ಕೊಟ್ಟ ಗುರುಗಳನ್ನು ಸ್ಮರಿಸುವುದು ಈ ಗ್ರಾಮದ ಅಭಿಮಾನವಾಗಿದೆ ಎಂದರು. ಹಳೇ ವಿದ್ಯಾರ್ಥಿಗಳು ಹಾಗೂ ಗುರುಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net