

ಕೆರೂರ: ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬುತ್ತಿ ಬಿತ್ತುವ ಏಕೈಕ ವ್ಯಕ್ತಿ ಗುರುವಾಗಿದ್ದಾನೆ ಎಂದು ನಿವೃತ್ತ ಶಿಕ್ಷಕ ಡಿ.ಪಿ. ಅಮಲಝರಿ ಹೇಳಿದರು.
ಪಟ್ಟಣದ ಬಿ.ಬಿ. ನಿಲುಗಲ್ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉನ್ನತ ಹುದ್ದೆಗಳಿಗೆ ತಲುಪಿದಾಗ ಲಂಚಕ್ಕಾಗಿ ಕೈ ಒಡ್ಡದೇ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಬೇಕು ಎಂದು ಕಿವಿಮಾತು ಹೇಳಿದರು.
ನಿವೃತ್ತ ಶಿಕ್ಷಕ ಆರ್.ಆರ್. ಶೆಟ್ಟರ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರೂ ಆದರ್ಶಗಳನ್ನು ಇಟ್ಟುಕೊಂಡು ಬದುಕು ಕಟ್ಟಿಕೊಳ್ಳಬೇಕು. ನಿಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಿ, ರಾಷ್ಟ್ರಾಭಿಮಾನ ಬೆಳೆಸಬೇಕು ಎಂದರು.
ದೇವಾಂಗಮಠದ ರುದ್ರಮುನಿ ಅವರು ಮಾತನಾಡಿ, ಗುರು-ಶಿಷ್ಯರ ಬಾಂಧವ್ಯಕ್ಕೆ ಇತಿಹಾಸದಲ್ಲಿ ಜ್ಞಾನ ಪರಂಪರೆ ಮೂಲ ಆಧಾರವಾಗಿದೆ ಎಂದರು.
ಮಾಂತೇಶ ಮೆಣಸಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಬಿ.ಎಚ್. ಬಜಂತ್ರಿ, ವೈ.ಡಿ. ರಡ್ಡೇರ, ಸಿ.ಎಸ್. ನಾಗನೂರ, ಶಿಕ್ಷಕರಾದ ಜೆ.ಎಸ್. ಬಾರಕೇರ, ಬಿ.ಆರ್. ಶೆಟ್ಟರ, ಶ್ರೀಕಾಂತ ಧಡಿ, ರಾಘವೇಂದ್ರ ಪರದೇಶಿ, ವಿಠ್ಠಲ ಮಾದರ, ಬಸವರಾಜ ಕುಂಬಾರ, ಅಶೋಕ ಗೌಡರ, ಬಸವರಾಜ ತೆಗ್ಗಿ, ಮಾಂತೇಶ ಮುಗಳಿ, ಲಕ್ಷ್ಮೀಕಾಂತ ಹೆಬ್ಬಳ್ಳಿ, ಮಹೇಶ ಹೆಬ್ಬಳ್ಳಿ, ತಿಪ್ಪಣ ಪರದೇಶಿ, ಗಂಗಾಧರ ಯಂಡಿಗೇರಿ, ಶಿವಾನಂದ ಮುಂಡಾಸದ, ಗೋಪಾಲ ಸಾಲಹಳ್ಳಿ, ಆರತಿ ಕ್ಷತ್ರಿ, ಮಂಜುಳಾ ಹಿರೇಮಠ, ಸುವರ್ಣಾ ಸಗರಿ, ಸುವರ್ಣಾ ಕುದರಿ, ರಾಚನ್ನ ಗುತ್ತನ್ನವರ, ಗೀತಾ ಮಾದರ, ಜ್ಯೋತಿ ಪರದೇಶಿ, ಅಶ್ವಿನಿ ಸಾಲಿಮಠ, ಪರಿಮಳ ಹಳಕಟ್ಟಿ, ಧರ್ಮಣ್ಣ ಚಿಮ್ಮನಕಟ್ಟಿ ಮತ್ತಿತರರಿದ್ದರು.