ಭಯ ಹುಟ್ಟಿಸಿದ ಬಂದೂಕು

crime
Published on

ಹುಬ್ಬಳ್ಳಿ: ವಿದ್ಯಾನಗರ ಬನಶಂಕರಿ ಬಡಾವಣೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ರಾತ್ರಿ ವೇಳೆ ನಾಲ್ವರು ಬಂದೂಕು ಹಿಡಿದುಕೊಂಡು ಓಡಾಡಿ ಭಯ ಹುಟ್ಟಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅರ್ಜುನ, ಈರಣ್ಣ, ಚನ್ನಬಸಪ್ಪ, ಕುಮಾರ ಎಂಬುವರ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
ಡಿ. 24ರಂದು ರಾತ್ರಿ 9.30ರ ಸುಮಾರಿಗೆ ನಾಲ್ವರು ಕೈಯಲ್ಲಿ ಬಂದೂಕು ಹಿಡಿದುಕೊಂಡು ಬಂದು ಬಾಡಿಗೆದಾರರಿಗೆ ಭಯ ಹುಟ್ಟಿಸಿದ್ದಾರೆ ಎನ್ನಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net