ಕಾಂಗ್ರೆಸ್​ಗೆ​ ಬಾ.. ಮುಂದಿನ ಚುನಾವಣೆಗೆ ನೀನೇ ಪಕ್ಷದ ಅಭ್ಯರ್ಥಿ... ಜೆಡಿಎಸ್​ ಶಾಸಕನಿಗೆ ಆಹ್ವಾನವಿತ್ತ ಸಿದ್ದರಾಮಯ್ಯ

gubbi srinivas
Published on

ಗುಬ್ಬಿ: ಎಸ್.ಆರ್.ಶ್ರೀನಿವಾಸ್ ಪಕ್ಷಕ್ಕೆ ಬಂದರೇ ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುವುದು ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ಇಂದು ಕ್ಷೇತ್ರದಲ್ಲಿ ಜೆಡಿಎಸ್ ಇದೆ. ವಾಸು ಇಲ್ಲ ಅಂದ್ರೆ ಜೆಡಿಎಸ್ ಎಲ್ಲಿ ಇರುತ್ತೆ? ಕಾಂಗ್ರೆಸ್​ ಪಕ್ಷಕ್ಕೆ ವಾಸು ಅವರನ್ನ ಮುಕ್ತವಾಗಿ ಆಹ್ವಾನಿಸುತ್ತೇನೆ ಎಂದರು.

ಬಿಜೆಪಿ- ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು. ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಜೆಡಿಎಸ್ ಟಿಕೆಟ್ ಕೊಡಲಾಗಿದೆ‌. ಅದೇ ಅವರ ಕುಟುಂಬದವರು ಸ್ಪರ್ಧಿಸುವ ಹಾಸನ, ರಾಮನಗರದಲ್ಲಿ ಕೊಡಲಿ ನೋಡೋಣ ಎಂದು ಸಿದ್ದರಾಮಯ್ಯ ಹರಿಹಾಯ್ದರು.

ಶ್ರೀನಿವಾಸ್ ಕರೊನಾ ವೇಳೆ ಜನರಿಗೆ ಸ್ಪಂದಿಸಿದ್ದಾರೆ. ಅದಕ್ಕೆ ಇಷ್ಟು ಜನಪ್ರಿಯ ಆಗಿರೋದು. ನಾಲ್ಕು ಬಾರಿ ಅವರನ್ನ ಎಂಎಲ್​ಎ ಮಾಡೀದ್ದೀರಿ. ಐದನೇ ಬಾರಿನೂ ಮಾಡ್ತೀರಾ? ಎಂದು ಜನರನ್ನ ಸಿದ್ದರಾಮಯ್ಯ ಪ್ರಶ್ನಿಸಿದರು. ಕಾಂಗ್ರೆಸ್​ಗೆ ಬಾ ಅಂತ ವಾಸುನ ಎರಡ್ಮೂರು ಸಲ ಕರೆದೆ. ಇವ್ರು ಇಲ್ಲಣ್ಣ ಬರಲ್ಲಾ, ಜೆಡಿಎಸ್​ನಲ್ಲೇ‌ ಇರ್ತೀನಿ ಅಂದ್ರು. ಹೇ ಯಾಕಪ್ಪ ಜೆಡಿಎಸ್ ಮುಳುಗೋ ಹಡಗು ಅಂದೆ. ಜೆಡಿಎಸ್​ನವ್ರು ಅವಕಾಶವಾದಿಗಳು ಎಂದಿದ್ದೆ. ಮೊನ್ನೆ ಏನೋ‌ ಕುಮಾರಸ್ವಾಮಿ ಬಂದಿದ್ರಂತೆ ಇಲ್ಲಿಗೆ. ವಾಸುಗೆ ಗೊತ್ತಿಲ್ಲದೇ ಬಂದು ಇಲ್ಲಿ ಸಭೆ ಮಾಡವ್ರಂತೆ. ಆ ಕುಮಾರಸ್ವಾಮಿಗೆ ಏನಾದ್ರೂ ಹೇಳಿದ್ರೆ ಜಾತಿ ಬಣ್ಣ ಕಟ್ಟಿಬಿಡ್ತಾರೆ ಎಂದು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net