

ಮುಂಡರಗಿ: ಪಂಚ ಗ್ಯಾರಂಟಿಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲು ಪ್ರತಿ ತಿಂಗಳಿಗೊಮ್ಮೆ ಗ್ರಾಪಂ ಮಟ್ಟದಲ್ಲಿ ಸಭೆ ಮಾಡಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಗದಗ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.
ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಐದು ಗ್ಯಾರಂಟಿಗಳಿಂದ ದೂರ ಉಳಿದವರನ್ನು ಗುರುತಿಸಿ ಅವರನ್ನು ಯೋಜನೆಗೆ ಒಳಪಡಿಸಬೇಕು. ಜಿಎಸ್‌ಟಿ ನಂಬರ್ ರದ್ದುಪಡಿಸಿದವರನ್ನು ಫಲಾನುಭವಿಯಾಗಿ ಪರಿಗಣಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಬೇಕು. ಗದಗ ಜಿಲ್ಲೆ ಶೇ. 98.5ರಷ್ಟು ಪ್ರತಿಶತ ಸಾಧನೆ ಮಾಡಿದೆ. ಶೇ. 100ರಷ್ಟು ಸಾಧಿಸಬೇಕು. ಈ ನಿಟ್ಟಿನಲ್ಲಿ ಸಮಿತಿಯವರು, ಅಧಿಕಾರಿಗಳು ತಾಂತ್ರಿಕ ಸಮಸ್ಯೆ ಸರಿಪಡಿಸಿ ಯೋಜನೆ ತಲುಪಿಸಬೇಕು ಎಂದರು.
ಹೆಸ್ಕಾಂ ಎಇಇ ಸಂತೋಷ ಆನೆಕಲ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಆನಂದ ಹೊಂಬಳ, ಸ್ಥಳೀಯ ಸಾರಿಗೆ ಘಟಕದ ವ್ಯವಸ್ಥಾಪಕ ಶೇಖರ ನಾಯಕ, ಸಿಡಿಪಿಒ ಕಚೇರಿ ನೌಕರ ಆನಂದ ಪಾಟೀಲ, ಆಹಾರ ನಿರೀಕ್ಷಕ ಜಗದೀಶ ಅಮಾತಿ ಮಾಹಿತಿ ಒದಗಿಸಿದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೊರನಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಇಒ ವಿಶ್ವನಾಥ ಹೊಸಮನಿ, ಜಿಲ್ಲಾ ಸಮಿತಿ ಸದಸ್ಯರಾದ ಪುಲಿಕೇಶಗೌಡ ಪಾಟೀಲ, ಈಶ್ವರ ಹುಣಸಿಕಟ್ಟಿ, ತಾಲೂಕು ಸಮಿತಿ ಸದಸ್ಯರಾದ ರಾಮಣ್ಣ ಮೇಗಳಮನಿ, ಕಾಶಪ್ಪ ಹೊನ್ನೂರು, ಭುವನೇಶ್ವರಿ ಕಲ್ಲಕುಟಗರ, ಗೀತಾ ನಾಡಗೌಡ್ರ, ಉಮೇಶ ಕಲಾಲ, ಸುರೇಶ ಮ್ಯಾಗಳಮನಿ, ವಿಶ್ವನಾಥ ಪಾಟೀಲ, ನಿಂಗಪ್ಪ ಮಜ್ಜಿಗಿ, ನಾಗರಾಜ ಸಜ್ಜನರ, ಮಹೇಶ ದ್ರಾಕ್ಷಿ, ಶರಣಪ್ಪ ಮಲ್ಲಾಪೂರ ಇತರರು ಇದ್ದರು.