

ಇಳಕಲ್ಲ (ಗ್ರಾ) :ಮುಖಕ್ಕೆ ಪ್ಲಾಸ್ಟಿಕ್ ಡಬ್ಬ ಸಿಲುಕಿಕೊಂಡು ಒದ್ದಾಡುತ್ತಿದ್ದ ನಾಯಿಯನ್ನು ಯುವಕರ ತಂಡ ಕಾಪಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇಳಕಲ್ಲ ನಗರದಲ್ಲಿ ಬೀದಿ ನಾಯಿಯೊಂದು ಆಹಾರಕ್ಕಾಗಿ ಅಲೆದಾಡುತ್ತಿದ್ದಾಗ ಮುಖಕ್ಕೆ ಪ್ಲಾಸ್ಟಿಕ್ ಡಬ್ಬವನ್ನು ಸಿಲುಕಿಸಿಕೊಂಡಿತ್ತು. ಇದರಿಂದ ದಿಕ್ಕು ತೋಚದಂತಾಗಿ ಎಲ್ಲೆಂದರಲ್ಲಿ ಓಡಾಡುತ್ತಲೇ ಇತ್ತು. ನಗರದ 4 ನೇ ವಾರ್ಡ್ನಲ್ಲಿ ನಾಯಿ ಪರಿಸ್ಥಿತಿ ನೋಡಿದ ಅಲ್ಲಿನ ಯುವಕರು ಚಾಣಾಕ್ಷತನದಿಂದ ಹಿಡಿದು ಪ್ಲಾಸ್ಟಿಕ್ ಡಬ್ಬಿ ತೆಗೆದಿದ್ದಾರೆ. ಇದರಿಂದ ಮೂಕಜೀವಿಯ ಪ್ರಾಣ ರಕ್ಷಣೆ ಮಾಡಿದಂತಾಗಿದೆ.
ಇಳಕಲ್ಲ ನಗರದ 4ನೇ ವಾರ್ಡ್ನಲ್ಲಿ ಯುವಕರು ನಾಯಿ ಮುಖಕ್ಕೆ ಸಿಲುಕಿಕೊಂಡಿರುವ ಪ್ಲಾಸ್ಟಿಕ್ ಡಬ್ಬಿ ತೆಗೆಯುತ್ತಿರುವ ಯುವಕರು.
ನಾಯಿಯ ಮುಖಕ್ಕೆ ಸಿಲುಕಿಕೊಂಡಿರುವ ಪ್ಲಾಸ್ಟಿಕ್ ಡಬ್ಬಿ.