ಸ್ಪರ್ಧೆಯ ರೋಚಕತೆ ಸವಿದ ರೈತ ಸಮೂಹ

A group of farmers enjoyed the excitement of the competition.
ಲೋಕಾಪುರ ಲೋಕೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಚಕ್ಕಡಿ ಸ್ಪರ್ಧೆಯಲ್ಲಿ ಎತ್ತುಗಳನ್ನು ಹುರಿದುಂಬಿಸುತ್ತಿರುವ ರೈತರು.
Published on

ಲೋಕಾಪುರ : ಲೋಕೇಶ್ವರ ಜಾತ್ರೆ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸುತ್ತಲಿನ ಹತ್ತಾರು ಗ್ರಾಮಗಳಿಂದ ಆಗಮಿಸಿದ ರೈತರು, ತೆರೆಬಂಡಿ ಸ್ಪರ್ಧೆಯನ್ನು ಕುತೂಹಲದಿಂದ ವೀಕ್ಷಿಸಿದರು. ಚಕ್ಕಡಿ ಓಡಿಸುವ ಸ್ಪಧೆಯಲ್ಲಿ ಕಂಡು ಬಂದ ದೃಶ್ಯಗಳು ಮೈನವಿರೇಳಿಸಿದವು. ಮೊದಲ ಸ್ಥಾನ ಪಡೆಯಬೇಕು ಎಂಬ ಹಂಬಲದೊಂದಿಗೆ ಚಕ್ಕಡಿಯನ್ನು ಜೋರಾಗಿ ಓಡಿಸಲು ರೈತರು ಕಸರತ್ತು ಮಾಡಿ ಎತ್ತುಗಳನ್ನು ಹುರಿದುಂಬಿಸುತ್ತಿದ್ದರು. ನಾನಾ ಕಡೆಯಿಂದ ಆಗಮಿಸಿದ್ದ ಅನೇಕ ರೈತರು ಸ್ಪರ್ಧೆಯಲ್ಲಿ ಪಾಲ್ಗೊಂಡು ಜೋಡೆತ್ತುಗಳ ಶೌರ್ಯ ಪ್ರದರ್ಶಿಸಿದರು.

ವಿವಿಧ ಸ್ಪರ್ಧೆಗಳ ವಿಜೇತರು:

ತೆರೆಬಂಡಿ ಸ್ಪರ್ಧೆಯಲ್ಲಿ ಮೆಳ್ಳಿಗೇರಿ ಗ್ರಾಮದ ಸತ್ಯವ್ವ ದೇವಿ ಪ್ರಸನ್ನ ಪ್ರಥಮ, ಚಿಪ್ಪಲಕಟ್ಟಿ ಗ್ರಾಮದ ಲಕ್ಷ್ಮೀದೇವಿ ಪ್ರಸನ್ನ ದ್ವಿತೀಯ, ವೆಂಕಟಾಪುರ ಗ್ರಾಮದ ಹೊಳಬಸವೇಶ್ವರ ತೃತೀಯ ಹಾಗೂ ಮೆಟಗುಡ್ಡ ಗ್ರಾಮದ ಶ್ರೀ ಕಾಶಿಲಿಂಗ ಪ್ರಸನ್ನ ನಾಲ್ಕನೇ ಸ್ಥಾನ ಪಡೆದುಕೊಂಡಿವೆ.

ನಿಮಿಷದ ಚಕ್ಕಡಿ ಸ್ಪರ್ಧೆ: ಮಾಚಕನೂರ ಗ್ರಾಮದ ಹೊಳಬಸವೇಶ್ವರ ಪ್ರಸನ್ನ ಪ್ರಥಮ, ಉದಗಟ್ಟಿ ಉದ್ದಮದೇವಿ ಪ್ರಸನ್ನ ದ್ವಿತೀಯ, ಮಲ್ಲಾಪುರ (ಕೆಡಬ್ಲುೃ) ಅವಧೂತ ಕಲ್ಮೇಶ್ವರ ಪ್ರಸನ್ನ ತೃತೀಯ ಹಾಗೂ ನಾಲ್ಕನೇ ಸ್ಥಾನವನ್ನು ಲೋಕಾಪುರದ ರಮೇಶ ದುರ್ಗಪ್ಪ ಗಸ್ತಿ, ಬೆಳಗಲಿ ಗ್ರಾಮದ ಬಂದಲಕ್ಷ್ಮೀ ದೇವಿ ಪ್ರಸನ್ನ, ಸಿಗಿಹೊಳಿ (ಆರ್) ಮಹಾಲಕ್ಷ್ಮೀ ಪ್ರಸನ್ನ, ಹೆಬ್ಬಾಳ ಗ್ರಾಮದ ಜೈ ಹನುಮಾನ್ ಪ್ರಸನ್ನ ಪಡೆದುಕೊಂಡಿವೆ.

ಸುತಬಂಡಿ ಸ್ಪರ್ಧೆ: ಯಲ್ಲಟ್ಟಿ ಗ್ರಾಮದ ಅರಣ್ಯ ಸಿದ್ದೇಶ್ವರ ಪ್ರಸನ್ನ ಪ್ರಥಮ, ಸುಳೇಭಾವಿ ಗ್ರಾಮದ ಪ್ರಕಾಶ ಕುರಿ ದ್ವೀತಿಯ, ಹಂಚಿನಾಳ ಗ್ರಾಮದ ಮೈಬುಸುಬಾನಿ ಪ್ರಸನ್ನ ತೃತೀಯ, ಹಿಪ್ಪರಗಿ ಗ್ರಾಮದ ರಾಜಾ ಲಕ್ಷಾೃ,ಅಬ್ಬಿಹಾಳ ಗ್ರಾಮದ ಭಗವಂತ ದೊಡಮನಿ ನಾಲ್ಕನೇ ಸ್ಥಾನ ಪಡೆದು ಬಹುಮಾನ ಪಡೆದುಕೊಂಡಿವೆ.

ಚಕ್ಕಡಿ ಸ್ಪರ್ಧೆ: ಕುಮಟಿ ಬಾಳು ಸಿಂಧೆ ಪ್ರಥಮ,ಅಥಣಿಯ ಸಾದೇವ ಅಥಣಿ ಹಾಗೂ ಗುರುಲಿಂಗೇಶ್ವರ ಅರಕೇರಿ ದ್ವಿತೀಯ, ರತ್ನಾಪುರದ ಮಚಂದ್ರ ಅಡವಿ ತೃತೀಯ, ತುರನೂರದ ವಿಠ್ಠಲ ದೇವಿ ನಾಲ್ಕನೇ ಸ್ಥಾನ ಪಡೆದು ಬಹುಮಾನ ಪಡೆದುಕೊಂಡರು.

ರಂಗೋಲಿ ಸ್ಪರ್ಧೆ: ಲೋಕೇಶ್ವರ ದೇವಸ್ಥಾನ ಆವರಣದಲ್ಲಿ ಆಯೊಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ರಾಯಭಾಗದ ರಾಘವೇಂದ್ರ ಕೊಕಟೆ ಪ್ರಥಮ, ಮಹಾಲಿಂಗಪುರದ ಸುರೇಖಾ ಕೋರಿಶೆಟ್ಟಿ ದ್ವಿತೀಯ, ಲಕ್ಷಾನಟ್ಟಿ ಗ್ರಾಮದ ಜಾನು ಮಾಳೇದ ತೃತೀಯ, ಲೋಕಾಪುರದ ರಾಜೇಶ್ವರಿ ಮನಗೂಳಿ ನಾಲ್ಕನೇ ಸ್ಥಾನ ಹಾಗೂ ಶೋಭಾ ದಾನಿ ಐದನೇ ಸ್ಥಾನ ಪಡೆದುಕೊಂಡರು.

ಡಾ. ಕೆ.ಎಲ್. ಉದಪುಡಿ, ಕಿರಣರಾವ ದೇಸಾಯಿ, ಪ್ರಕಾಶ ಚುಳಕಿ, ಅರುಣ ನರಗುಂದ, ಮುದಕಪ್ಪ ಚಿಗರಡ್ಡಿ, ಪ್ರಮೋದ ತೆಗ್ಗಿ, ಗೋವಿಂದ ಕೌಲಗಿ, ಹಣಮಂತಿ ಬಿದರಿ, ಲೋಕಯ್ಯ ಗಣಾಚಾರಿ, ಯಲ್ಲಪ್ಪ ತಳವಾರ, ವಿನಾಯಕ ಗಂಗಣ್ಣವರ, ಗಿರೀಶ ಹುಕುಮನವರ, ರವಿಗೌಡ ಚೌಧರಿ, ವಿಠ್ಠಲ ಹೂಗಾರ, ದೀಪಕ ದೇಸಾಯಿ, ಸುರೇಶ ಚೌಧರಿ, ವಿಠ್ಠಲ ಹುಗ್ಗಿ, ಲೋಕಣ್ಣ ಹೂಗಾರ, ಹೊಳಬಸು ಹುಬ್ಬಳ್ಳಿ, ನವೀನ ಚೌಧರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net