ಮಹದೇಶ್ವರ ತೇರು ಎಳೆದ ಭಕ್ತ ವೃಂದ

Oplus_131072
ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದ ಮಹದೇಶ್ವರ ದೇಗುಲದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
Published on

ಯಳಂದೂರು: ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಮಹದೇಶ್ವರ ದೇಗುಲಕ್ಕೆ ಶುಕ್ರವಾರ ಸಾವಿರಾರು ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದೇಗುಲದಲ್ಲಿ ಮುಂಜಾನೆಯಿಂದಲೇ ರುದ್ರಾಭಿಷೇಕ ನೆರವೇರಿತು. ವಿವಿಧ ಫಲ, ಪುಷ್ಪಗಳಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಹೊರ ಭಾಗದಲ್ಲಿ ಮಹದೇಶ್ವರನ ತೇರನ್ನು ಎಳೆಸುವ ಮೂಲಕ ಹಾಗೂ ದಂಡುಗೋಲು ಸೇವೆ ಮಾಡಿಸುವ ಮೂಲಕ ಭಕ್ತಿ ಮೆರೆದರು.

ಭಕ್ತರಿಗೆ ದೇಗುಲ ಆಡಳಿತ ಮಂಡಳಿಯಿಂದ ದೊಡ್ಡ ಆಲದ ಮರದ ಕೆಳಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂತೇಮರಹಳ್ಳಿ ಗ್ರಾಮದ ಮಲೆ ಮಹದೇಶ್ವರ ದೇಗುಲ, ಯಳಂದೂರು ಪಟ್ಟಣದ ಗೌರೇಶ್ವರ ದೇಗುಲ, ಬಿಳಿಗಿರಿರಂಗನಬೆಟ್ಟದ ಗಂಗಾಧರೇಶ್ವರ ದೇಗುಲ, ವಡಗೆರೆ, ಗುಂಬಳ್ಳಿ, ಗಂಗವಾಡಿ ಸೇರಿದಂತೆ ವಿವಿಧ ಗ್ರಾಮಗಳ ದೇಗುಲಗಳಲ್ಲಿ ಅಮಾವಾಸ್ಯೆ ಪೂಜೆಗಳು ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net