ಶ್ರೇಷ್ಠ ಆಧ್ಯಾತ್ಮಿಕ ಸಂತ

A great spiritual saint
A great spiritual saint
Published on

ದೇವರಹಿಪ್ಪರಗಿ: ಶಂಕರಾಚಾರ್ಯರು ಅಧೈತ ವೇದಾಂತ ಮೂಲಕ ಹಿಂದು ಧರ್ಮವನ್ನು ಪುನರುಜ್ಜೀವನಗೊಳಿಸಿದ ಶ್ರೇಷ್ಠ ಆಧ್ಯಾತ್ಮಿಕ ಸಂತರಾಗಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಅಧ್ಯ ಜಿ.ಪಿ. ಬಿರಾದಾರ ಹೇಳಿದರು.

ತಾಲೂಕು ಆಡಳಿತದಡಿ ಶುಕ್ರವಾರ ನಡೆದ ಆದಿ ಜಗದ್ಗುರು ಶಂಕರಾಚಾರ್ಯರ 1237ನೇ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಂಸತಿಕ ಮತ್ತು ಧಾರ್ಮಿಕ ಅವನತಿಯ ಸಮಯದಲ್ಲಿ ಹಿಂದು ಧರ್ಮದ ಆಶಾಕಿರಣವಾಗಿ ನಿರ್ಣಾಯಕ ಪಾತ್ರ ವಹಿಸಿದ ಶಂಕರಾಚಾರ್ಯರು ಭಾರತೀಯ ತತ್ವಶಾಸ್ತ್ರದ ಶ್ರೇಷ್ಠ ವ್ಯಕ್ತಿಯಾಗಿದ್ದರು ಎಂದರು.

ಶಿಕ ಪ್ರಲ್ಹಾದ ಕುಲಕರ್ಣಿ ಆದಿಜಗದ್ಗುರು ಶಂಕರರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್​ ಪ್ರಕಾಶ ಸಿಂದಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿರಸ್ತೇದಾರ ಸುರೇಶ ಮ್ಯಾಗೇರಿ, ಶಿಕ ಬಸವರಾಜ ಬಡಿಗೇರ, ಪಾಂಡುರಂಗ ದೇಶಪಾಂಡೆ, ವೆಂಕಟೇಶ ಕುಲಕರ್ಣಿ, ನರೇಂದ್ರ ನಾಡಗೌಡ, ಗುರುರಾಜ ಕುಲಕರ್ಣಿ, ಪಿ.ಆರ್​. ಕುಲಕರ್ಣಿ, ಶ್ರೀಧರ ನಾಡಗೌಡ, ಸುಧೀರ ಕುಲಕರ್ಣಿ, ಪ್ರವಿಣ ಕುಲಕರ್ಣಿ ಸಿಬ್ಬಂದಿ ಚನ್ನಬಸು ಹೊಸಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net