ಸಮಾಜದ ಏಳಿಗೆಗೆ ಶ್ರಮಿಸಿದ ಮಹಾಚೇತನ: ಸಚ್ಚಿದಾನಂದ ಭಟ್ ಹೇಳಿಕೆ

Kin_great spirit
Published on

ಕಿನ್ನಿಗೋಳಿ: ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಜಿಎಸ್‌ಬಿ ಸಮಾಜದ ಏಳಿಗೆಗಾಗಿ ಶ್ರಮಿಸಿದ ಮಹಾ ಚೇತನ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಸಮಾಜವನ್ನು ಸದೃಢಗೊಳಿಸಿ ಸಮಾಜ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವರ ಮಾರ್ಗದರ್ಶನ ಮುಖ್ಯವಾಗಿತ್ತು ಎಂದು ಸಚ್ಚಿದಾನಂದ ಭಟ್ ಹೇಳಿದರು.

ಶ್ರೀ ರಾಮ ಮಂದಿರ ಕಿನ್ನಿಗೋಳಿ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ 8ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು. ಶ್ರೀ ಗುರುಗಳ ಭಾವಚಿತ್ರಕ್ಕೆ ಆರತಿ ಬೆಳಗಲಾಯಿತು.

ರಾಮ ಮಂದಿರ ಪ್ರಧಾನ ಅರ್ಚಕ ಗಿರೀಶ್ ಭಟ್ ಮಾತನಾಡಿದರು.ಆರಾಧನಾ ಮಹೋತ್ಸವದ ಅಂಗವಾಗಿ ವಿಶೇಷ ಭಜನೆ, ಶ್ರೀ ದೇವರಿಗೆ ಹೂವಿನ ಪೂಜೆ ನಡೆಯಿತು. ಮಂದಿರದ ಅಧ್ಯಕ್ಷ ರಾಜೇಶ್ ನಾಯಕ್ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಮೂರುಕಾವೇರಿ, ಆಡಳಿತ ಮಂಡಳಿಯ ರಾಘವೇಂದ್ರ ಪ್ರಭು, ರಘುವೀರ್ ಕಾಮತ್, ಅದಿತ್ಯ ಕಾಮತ್, ಗುರುದತ್ತ ರಾವ್, ಗಣೇಶ್ ಪ್ರಸಾದ್ ಕಾಮತ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net