ಜಾತಿ ವ್ಯವಸ್ಥೆ ಮೀರಿ ಬೆಳೆದ ಶ್ರೇಷ್ಠ ಸಂತ

A great saint who rose above the caste system
ಮಹಾಲಿಂಗಪುರದ ಶ್ರೀ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಜರುಗಿದ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರ ತೃತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರಾಜೇಸಾಬ ಹಳಿಂಗಳಿ ಅವರಿಗೆ ಮರಣೋತ್ತರವಾಗಿ ನೀಡಲಾದ ಪ್ರಶಸ್ತಿಯನ್ನು ಅವರ ಕುಟುಂಬದವರು ಸ್ವೀಕರಿಸಿದರು. ಸಹಜಾನಂದ ಶ್ರೀಗಳು, ಹಂದಿಗುಂದನ ಶಿವಾನಂದ ಮಹಾಸ್ವಾಮಿಗಳು, ಡಾ.ಅಮೀರುದ್ದೀನ ಖಾಜಿ ಮತ್ತಿತರರಿದ್ದರು.
Published on

ಮಹಾಲಿಂಗಪುರ: ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರು ತಮ್ಮ ಕಂಚಿನ ಕಂಠದ ಮೂಲಕ ಪ್ರವಚನ ನೀಡಿ ಎಲ್ಲರ ಹೃದಯ ಬೆಸೆದ ಭಾವೈಕ್ಯ ರತ್ನವಾಗಿದ್ದರು ಎಂದು ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ಹೇಳಿದರು.

ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಆಯೋಜಿಸಿದ್ದ ಇಬ್ರಾಹಿಂ ಸುತಾರ ಅವರ ತೃತೀಯ ಪುಣ್ಯಸ್ಮರಣೆ, ಭಾವೈಕ್ಯ ದಿನೋತ್ಸವ ಹಾಗೂ ಭಾವೈಕ್ಯಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಅವರು, ಇಬ್ರಾಹಿಂ ಸುತಾರ ಅವರು ಜಾತಿ ವ್ಯವಸ್ಥೆ ಮೀರಿ ಬೆಳೆದ ಶ್ರೇಷ್ಠ ಸಂತ. ಅವರ ಪ್ರವಚನ ಕೇಳಲು ಸಾವಿರಾರು ಜನರು ಆಗಮಿಸುತ್ತಿದ್ದರು ಎಂದರು.

ಹಿರಿಯ ಸಾಹಿತಿ ಡಾ ಅಮೀರುದ್ದೀನ ಖಾಜಿ ಮಾತನಾಡಿ, ಮಹಲಿಂಗಪುರವು ಭಾವೈಕ್ಯತೆ ತುಂಬಿದ ನಗರ. ಬಸವಾದಿ ಶರಣರು ಅನ್ನದಾಸೋಹದ ಜತೆ ಜ್ಞಾನ ದಾಸೋಹವನ್ನು ನಾಡಿಗೆ ಉಣಬಡಿಸಿದ್ದಾರೆ. ಇಬ್ರಾಹಿಂ ಸುತಾರರು ಅವರಂತೆ ಭಾವೈಕ್ಯತೆಯ ರಾಯಭಾರಿಗಳಾಗಿ ನಗರದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದರು. ಅವರಿಗೆ ಪಧ್ಮಶ್ರೀ ಪ್ರಶಸ್ತಿ ದೊರಕಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಶರಣ ಮಲ್ಲಪ್ಪ ಕಟಗಿ ಮಾತನಾಡಿದರು. ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಯೋಗಿ ಸಹಜಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಯಾದವಾಡದ ಹಿರಿಯ ಅಧ್ಯಾತ್ಮ ಜೀವಿ ವೀರೂಪಾಕ್ಷ ಪಾವಟೆ, ಜನಾಬ ಶಾಮಶುದ್ದಿನ ಝಾರೆ, ಹಾಫಿಜ್ ಮೊಹಮ್ಮದ ಅಲಿ, ಎಸ್ ಹೆಚ್ ನದ್ಾ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ

ಮಹಾಲಿಂಗಪುರದ ಹಿರಿಯ ಭಜನಾ ಕಲಾವಿದ ಅಧ್ಯಾತ್ಮ ಚಿಂತಕರಾದ ದಿ ರಾಜೇಸಾಬ ಹಳಿಂಗಳಿ ಅವರಿಗೆ ಮರಣೋತ್ತರವಾಗಿ 2024-25ನೇ ಸಾಲಿನ ಭಾವೈಕ್ಯಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಅವರ ಪತ್ನಿ ಮತ್ತು ಪುತ್ರನಿಗೆ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಅಲ್ಲಪ್ಪ ಗುಂಜಿಗಾಂವಿ, ಡಾ.ಬಿ.ಡಿ. ಸೋರಗಾಂವಿ, ರಾಜೇಸಾಬ ಪಕಾಲಿ, ಎಸ್.ಜಿ ಮಠಪತಿ, ಸಿ.ಎಂ. ಕಟಗಿ, ಬಸವರಾಜ ಮೇಟಿ, ಗೌಡಪ್ಪಗೌಡ ಪಾಟೀಲ, ಚಂದ್ರಶೇಖರ ಕೊಳಕಿ, ಸಿದ್ಧಾರೂಢ ಮುಗಳಖೊಡ, ಈಶ್ವರ ವಂದಾಲ, ಮಹಾಲಿಂಗ ಕರೆಹೊನ್ನ, ಮಹದೇವಪ್ಪ ಮರೆಗುದ್ದಿ, ಮಹಾಲಿಂಗ ಬಿಂಜಲಬಾವಿ, ನಜೀರ ಅತ್ತಾರ, ಅಬ್ದುಲ್ ಸುತಾರ, ಈಶ್ವರ್ ಮುಂಡಗನೂರ, ಮೆಹಬೂಬ ಸನದಿ, ನಬಿಸಾಬ ಮುಲ್ಲಾ, ಹಣಮಂತ ರಾವಳ, ಅಶೋಕ ಸುನಧೋಳಿ, ಭೀಮಪ್ಪ ಗಜಾಗೋಳ ಮತ್ತಿತರರಿದ್ದರು.

ಕುಮಾರಿ ಸುಪೀಯಾ ಸುತಾರ ಕುರಾನ ಪಠಣ ಮಾಡಿದರು, ಸಿದ್ದಾನಂದ ಭಾರತಿ ಸ್ವಾಮಿಗಳು ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕ ಎಸ್.ಕೆ. ಗಿಂಡೆ ನಿರೂಪಿಸಿದರು. ಹುಮಯೂನ್ ಸುತಾರ ಸ್ವಾಗತಿಸಿದರು. ಎಂ.ಆರ್. ಬಿದರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net