ಧರ್ಮ ಸಂರಕ್ಷಿಸುವ ಮಹಿಮಾ ಪುರುಷ

ಸಿರಿಗೇರಿಯಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿ ಆಚರಿಸಲಾಯಿತು. ಅರ್ಚಕ ಕೆ.ಎಂ.ಗಂಗಾಧರಸ್ವಾಮಿ, ಬಿ.ಅಮರೇಶ ಗೌಡ, ಸಿ.ಎಂ.ನಾಗರಾಜ ಸ್ವಾಮಿ, ಆರ್.ನಾಗರಾಜ ಗೌಡ, ಗೋಡೆ ಚಂದ್ರಶೇಖರಗೌಡ, ಹಾಗಲೂರು ಮಲ್ಲನಗೌಡ ಇತರರಿದ್ದರು.
ಸಿರಿಗೇರಿಯಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿ ಆಚರಿಸಲಾಯಿತು. ಅರ್ಚಕ ಕೆ.ಎಂ.ಗಂಗಾಧರಸ್ವಾಮಿ, ಬಿ.ಅಮರೇಶ ಗೌಡ, ಸಿ.ಎಂ.ನಾಗರಾಜ ಸ್ವಾಮಿ, ಆರ್.ನಾಗರಾಜ ಗೌಡ, ಗೋಡೆ ಚಂದ್ರಶೇಖರಗೌಡ, ಹಾಗಲೂರು ಮಲ್ಲನಗೌಡ ಇತರರಿದ್ದರು.
Published on

ಸಿರಿಗೇರಿ: ಪರಶಿವನ ಉಗ್ರ ಅವತಾರ ಶ್ರೀ ವೀರಭದ್ರೇಶ್ವರ ಅಧರ್ಮ ನಾಶ ಮಾಡಿ ಧರ್ಮ ಸಂರಕ್ಷಿಸುವ ಮಹಿಮಾ ಪುರುಷ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಎಂ.ನಾಗರಾಜ ಸ್ವಾಮಿ ಹೇಳಿದರು. ಗ್ರಾಮದ 4ನೇ ವಾರ್ಡ್‌ನ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಪುಷ್ಪಾಲಂಕಾರ ನೆರವೇರಿಸಲಾಯಿತು. ಅರ್ಚಕ ಕೆ.ಎಂ.ಗಂಗಾಧರಸ್ವಾಮಿ, ಪ್ರಮುಖರಾದ ಬಿ.ಅಮರೇಶ ಗೌಡ, ಸಿ.ಎಂ.ನಾಗರಾಜ ಸ್ವಾಮಿ, ಆರ್.ನಾಗರಾಜ ಗೌಡ, ಗೋಡೆ ಚಂದ್ರಶೇಖರಗೌಡ, ಹಾಗಲೂರು ಮಲ್ಲನಗೌಡ, ಷಣ್ಮುಖಪ್ಪಗೌಡ, ಕೆ.ಎಂ.ಶಿವಪ್ಪ, ದರೂರು ಚೆನ್ನಪ್ಪ, ಕೆ.ಎಂ.ವೀರೇಶ, ದರೂರು ಬಸವರಾಜ್, ಎಸ್.ಎನ್.ಮಂಜುನಾಥಗೌಡ, ವಿಜಯಕುಮಾರ, ಹನುಮಂತಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net