ಕಾಯಕ ತತ್ವ ಸಾರಿದ ಮಹಾಪುರುಷ

11-ANP-P5 BASAVESVARA JAYANTI
ಆನಂದಪುರ ಸಮೀಪದ ಇರುವಕ್ಕಿ ಕೃಷಿ ಮತ್ತು ತೋಟಗಾರಿಕಾ ವಿವಿಯಲ್ಲಿ ಏರ್ಪಡಿಸಿದ್ದ ಬಸವೇಶ್ವರ ಜಯಂತಿಯಲ್ಲಿ ಕುಲಪತಿ ಆರ್.ಸಿ.ಜಗದೀಶ್ ಮಾತನಾಡಿದರು. ಡಾ. ಶಿವಶಂಕರ್, ಡಾ. ನಿಂಗರಾಜು, ಡಾ. ಶಿಲ್ಪಾ ಇದ್ದರು.
Published on

ಆನಂದಪುರ: ಜಗಜ್ಯೋತಿ ಬಸವೇಶ್ವರರು ಪ್ರತಿಯೊಬ್ಬನಲ್ಲಿಯೂ ದೇವನಿದ್ದು, ದೇಹವೇ ದೇವಾಲಯ ಎಂಬುದನ್ನು ಜಗತ್ತಿಗೆ ಸಾರಿದ ಮಹಾ ಮಾನವತಾವಾದಿ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗರಿಕಾ ವಿವಿ ಕುಲಪತಿ ಆರ್.ಸಿ.ಜಗದೀಶ್ ಹೇಳಿದರು.

ವಿವಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಸವೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಪುರುಷರು ಸಮಾನರು. ಸಮ ಸಮಾಜ ನಿರ್ಮಾಣ ಮಾಡುವುದಕ್ಕಾಗಿ ಬಸವಣ್ಣ ಶ್ರಮಿಸಿದ್ದರು. ವಚನಗಳ ಮೂಲಕ ಕಾಯಕದ ಮಹತ್ವ ಸಾರಿದರು ಎಂದು ತಿಳಿಸಿದರು.
ವಿವಿ ಕುಲಸಚಿವ ಡಾ. ಕೆ.ಸಿ.ಶಶಿಧರ ಮಾತನಾಡಿ, ವಚನಗಳನ್ನು ಬರಿ ಸಾಹಿತ್ಯವಾಗಿ ನೋಡದೆ ಅದರಲ್ಲಿನ ವೈಜ್ಞಾನಿಕ ಅಂಶ ಮತ್ತು ಕೃಷಿ ಜೀವನದ ತತ್ವಗಳನ್ನು ನೋಡಿದರೆ ಅದ್ಭುತ ಸಂಗತಿ ಅರಿವಾಗುತ್ತದೆ ಎಂದರು. ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಶಿವಶಂಕರ್, ಸಹಾಯಕ ನಿರ್ದೇಶಕ ಡಾ. ನಿಂಗರಾಜು, ನಿಲಯ ಪಾಲಕಿ ಡಾ. ಶಿಲ್ಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net