

ಮೈಸೂರು: ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಹಾಗೂ ಇಂಡಿಯನ್ ಟಿವಿ ಛೇರ್ಮನ್ ಎಸ್.ಬಸವರಾಜು ಅವರ ಪುತ್ರಿ ಅತೀವ ಆಯುಸಿರಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಸಾಧಕರ ಸಾಲಿಗೆ ಸೇರಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ನಡೆಸಿದ ಸ್ಪರ್ಧೆಯಲ್ಲಿ ಎರಡೂವರೆ ವರ್ಷದ ಅತೀವ ಆಯುಸಿರಿ ತನ್ನ ಬುದ್ಧಿ ಸಾಮರ್ಥ್ಯ ತೋರಿದ್ದಾಳೆ. ದೇಹದ 21 ಭಾಗಗಳು, 20 ಪ್ರಾಣಿಗಳು, 10 ಬಗೆಯ ವಾಹನಗಳು, ಪ್ಲುಜ್ ಬೋರ್ಡ್ ಜೋಡಣೆ, 10 ಬಗೆಯ ಯೋಗಾಸನಗಳ ಪ್ರದರ್ಶನ, ಪ್ರಾಣಿ-ಪಕ್ಷಿಗಳ ದನಿ ಅನುಕರಣೆ, ತಿಂಗಳು, ವಾರಗಳು, ಏಳು ಖಂಡಗಳು, ಎಂಟು ಪ್ಲಾನೆಟ್‌ಗಳು, ಹತ್ತು ಜನರಲ್ ನಾಲೆಡ್ಜ್ ಪ್ರಶ್ನೆಗಳು, ಇಂಗ್ಲಿಷ್ ಪದ್ಯ, ವರ್ಣಮಾಲೆ ಹೀಗೆ ಇದ್ದ ಎಲ್ಲ ಸ್ಪರ್ಧೆಗಳಲ್ಲಿಯೂ ಅತೀವ ಆಯುಸಿರಿ ಸರಿ ಉತ್ತರ ನೀಡಿ ವಿಜೇತಳಾಗಿದ್ದಾಳೆ.
ಮಗಳ ಈ ಸಾಧನೆಗೆ ಎಸ್. ಬಸವರಾಜು, ತಾಯಿ ಸುಚಿತ್ರಾ ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಎಂ.ಸೋನಿ ಕರೀಗೌಡರ ಕುಟುಂಬ, ಅಜ್ಜಿ, ತಾತಾ, ದೊಡ್ಡಪ್ಪ ಎಸ್.ವೆಂಕಟೇಶ್ ಕುಮಾರ್, ಚಿಕ್ಕಪ್ಪಂದಿರಾದ ಎಸ್.ರಾಜು, ಪ್ರಕಾಶ್, ಕೃಷ್ಣ ಸೇರಿ ಬಂಧುಗಳು ಅಭಿನಂದಿಸಿದ್ದಾರೆ.