ಹಿಂದುಳಿದವರ ಧ್ವನಿಯಾಗಿದ್ದ ಮಹಾನ್ ನಾಯಕ

devaraju arasu
ಬಾದಾಮಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಉದ್ಘಾಟಿಸಿದರು. ಬಿಸಿಎಂ ಇಲಾಖೆಯ ಪ್ರಭಾಕರ ಉಳ್ಳಾಗಡ್ಡಿ, ಬಾದಾಮಿ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಪ್ರಭಾರ ತಾಪಂ ಇಒ ಅಶೋಕ ತಿರಕನ್ನವರ ಇತರರಿದ್ದರು.
Published on

ಬಾದಾಮಿ: ಹಿಂದುಳಿದ ವರ್ಗದವರಿಗೆ ಧ್ವನಿ ಒದಗಿಸಿದ ಧೀಮಂತ ನಾಯಕ ಡಿ. ದೇವರಾಜ ಅರಸು ಅವರು ಸಾಮಾಜಿಕ ಪರಿವರ್ತನೆ ಹರಿಕಾರರು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ತಾಲೂಕು ಆಡಳಿತ, ತಾಪಂ, ಬಿಸಿಎಂ ಇಲಾಖೆ ಸಹಯೋಗದಲ್ಲಿ ಪಟ್ಟಣದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು 108ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅರಸು ಅವರು ನಾಡಿನ ಅಭಿವೃದ್ಧಿಯ ದಿಕ್ಕು ಬದಲಿಸಿದವರು. ಯಾವುದೇ ಕ್ರಾಂತಿಕಾರಕ ಭಾಷಣ ಮಾಡದೆ ಮೌನಕ್ರಾಂತಿ ಸಾಧಿಸಿ ಭಾರತದ ಇತಿಹಾಸದಲ್ಲಿ ಸಮಾಜವಾದಕ್ಕೆ ಹೊಸ ಭಾಷ್ಯ ಬರೆದರು ಎಂದು ತಿಳಿಸಿದರು.

ಬಿಸಿಎಂ ಇಲಾಖೆಯ ಪ್ರಭಾಕರ ಉಳಾಗಡ್ಡಿ ಉಪನ್ಯಾಸ ನೀಡಿದರು.

ಬಾದಾಮಿ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಪ್ರಭಾರ ತಾಪಂ ಇಒ ಅಶೋಕ ತಿರಕನ್ನವರ, ಗುಳೇದಗುಡ್ಡ ತಹಸೀಲ್ದಾರ್ ಎಸ್.ಬಿ. ಬೊಮ್ಮನ್ನವರ ಹಾಜರಿದ್ದರು. ಬಿಸಿಎಂ ವಿಸ್ತೀರ್ಣಾಧಿಕಾರಿ ಅನಿಲಕುಮಾರ ಸಾತಲಗಾಂವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net