

ಚಿಕ್ಕೋಡಿ: ಜಗಜ್ಯೋತಿ ಬಸವಣ್ಣ ವಚನಗಳ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಬಯಸಿ ಜನರಲ್ಲಿ ಜ್ಞಾನದ ದೀವಿಗೆ ಹಚ್ಚಿದ ಮಹಾನ್ ಮಾನವತಾವಾದಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಪಟ್ಟಣದಲ್ಲಿ ಸಂಪಾದನಾ ಚರಮೂರ್ತಿ ಮಠ, ಕದಳಿ ಮಹಿಳಾ ವೇದಿಕೆ, ಅಕ್ಕನ ಬಳಗ ಹಾಗೂ ವಿವಿಧ ಸಂಟನೆಗಳು ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಉತ್ಸವದ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕದ ಪಾಲಿಗೆ ಹನ್ನೆರಡನೇ ಶತಮಾನ ಮಹತ್ವದ್ದು. ಸಮಾಜದಲ್ಲಿ ಹೊಸ ಚಿಂತನೆ ರೂಪುಗೊಂಡ ಕಾಲವದು. ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿ ಹಲವು ಅನಿಷ್ಟ ಪದಟಛಿತಿಗಳು ಆಚರಣೆಯಲ್ಲಿದ್ದ ಕಾಲದಲ್ಲಿ ವಚನಕಾರರು ಸರಳವಾಗಿ ವಚನಗಳ ಮೂಲಕ ಬದಲಾವಣೆ ತರಲು ಪ್ರಯತ್ನಿಸಿದ್ದರು. ಜಾತಿಯ ಹಂಗಿಲ್ಲದೆ ವಚನಗಳ ಮೂಲಕ ಹೊಸ ಚಿಂತನೆ ಕಟ್ಟಿಕೊಟ್ಟು, ಜನರಲ್ಲಿ ಜಾಗತಿ ಮೂಡಿಸಿದ್ದಾರೆ. ಆದ್ದರಿಂದ ಯುವಪೀಳಿಗೆ ಬಸವಣ್ಣನ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಸಾನ್ನಿಧ್ಯ ವಹಿಸಿದ್ದ ಚಿಕ್ಕೋಡಿ ಸಂಪಾದನಾ ಸ್ವಾಮೀಜಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಸಮಾಜ ಸುಧಾರಕರ ಸಾರಥ್ಯದಲ್ಲಿ ಒಂದು ಸಾಮಾಜಿಕ ಚಳವಳಿ ರೂಪುಗೊಂಡಿತ್ತು. ಅವರ ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತ. ಕಾಯಕವೇ ಕೆಲಾಸ ಎಂದು ಕಲಿಸಿಕೊಟ್ಟವರು ಬಸವಣ್ಣನವರು ಎಂದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿದರು.
ಗಣ್ಯ ವ್ಯಾಪಾರಸ್ಥರಾದ ಸುಭಾಸ ಕವಲಾಪೂರೆ, ಮಹಾಂತೇಶ ಕವಟಗಿಮಠ ಹಾಗೂ ಸಂಪಾದನಾ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.
ಮಠದಲ್ಲಿ ಬಸವೇಶ್ವರರ ನಾಮಕರಣ ಹಾಗೂ ತಾಯಂದಿರಗೆ ಉಡಿತುಂಬಲಾಯಿತು. ಬಸವೇಶ್ವರ ಭಾವಚಿತ್ರದ ಮೆರವಣಿಗೆಯು ಸಕಲ ವಾದ್ಯ ವೆಭವದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಪುರಸಭೆ ಉಪಾಧ್ಯ ಇಾರ್ನ್ ಪಟೇಲ್, ಎನ್.ಎಸ್.ವಂಟಮುತ್ತೆ, ಪ್ರಭು ಬೆಲ್ಲದ, ಷಡರಿ ಮೂಗೇರಿ, ಮಾಜಿ ಉಪಾಧ್ಯ ಸಂಜಯ ಕವಟಗಿಮಠ, ವಿಶ್ವನಾಥ ಕಾಮಗೌಡ, ಮಹಾಲಿಂಗ ಮುತ್ತಪ್ಪಗೊಳ, ಶರತಚಂದ್ರ ಕವಟಗಿಮಠ, ಮಲ್ಲಿಕಾರ್ಜುನ ಕವಟಗಿಮಠ, ವಿಜಯ ವಂಟಮುತ್ತೆ, ಶಿವಾನಂದ ಸಮ್ಮತಶೆಟ್ಟಿ, ಡಾ.ದಯಾನಂದ ನೂಲಿ,
ಡಾ.ಬಸವರಾಜ ಚೌಗಲಾ, ದರ್ಶನ ಪೂಜಾರಿ, ಸತೀಶ ಸಲಗರೆ, ಸೋಮು ಗವನಾಳೆ, ಸುರೇಶ ಕಾಳಿಂಗೆ, ಮಲ್ಲೇಶ ಲಿಂಬಿಗಿಡದ, ಮಂಜುನಾಥ ರೊಟ್ಟಿ, ನಾಗರಾಜ ಮೇದಾರ, ಅಜಯ ಉದೋಶಿ, ಸುಭಾಷ ಕಬಾಡಗಿ,
ಸುರೇಶ ಕೌಜಲಗಿ ಇತರರಿದ್ದರು.