ಸಮಾಜಕ್ಕಾಗಿ ಚಿಂತಿಸಿದ ಮಹಾನ್ ಮಾನವತಾವಾದಿ

20
Published on

ಮೈಸೂರು: ವಿದ್ಯಾರಣ್ಯಪುರಂನ ಹೊಸ ಇಟ್ಟಿಗೆಗೂಡು ಡಾ.ಅಂಬೇಡ್ಕರ್ ಸಂಘದಿಂದ ಅಂಬೇಡ್ಕರ್ ಜನ್ಮ ದಿನ ಆಚರಿಸಲಾಯಿತು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಅಂಬೇಡ್ಕರ್ ಜಯಂತಿ ಆಚರಿಸುವುದು ಎಂದರೆ ಅಂಬೇಡ್ಕರ್ ಅವರ ಆಶಯಗಳನ್ನು ಪಾಲಿಸುವುದು, ಕಾರ್ಯಗತಗೊಳಿಸುವುದು ಎಂದರ್ಥ. ಅಂಬೇಡ್ಕರ್ ಬದುಕಲ್ಲಿ ನೂರೆಂಟು ಅವಮಾನಗಳನ್ನು ಅನುಭವಿಸಿದರು. ಆದರೂ ಯಾರನ್ನೂ ದ್ವೇಷ ಮಾಡದೆ ಸಮಾಜದ ಹಿತಕ್ಕಾಗಿ ಚಿಂತಿಸಿದ ಮಹಾನ್ ಮಾನವತಾವಾದಿ ಎಂದು ಬಣ್ಣಿಸಿದರು.

ಈ ದೇಶದಲ್ಲಿ ಅಂತಹ ಮಹನೀಯರನ್ನು ಪ್ರತಿ ದಿನವೂ ನೆನೆಯಬೇಕಾದಂತಹ ಋಣ ಪ್ರತಿಯೊಬ್ಬರ ಮೇಲಿದೆ. ಒಂದು ವೇಳೆ ಅವರು ನಮ್ಮ ಭೂಮಿಯಲ್ಲಿ ಹುಟ್ಟದೇ ಹೋಗಿದ್ದರೆ ದೇಶದ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ ಎಂದರು.

ಮಾಜಿ ಮೇಯರ್ ಬಿ.ಸಿದ್ದರಾಜು, ನಗರಪಾಲಿಕೆ ಮಾಜಿ ಸದಸ್ಯ ಎಂ.ಸುನಿಲ್, ಶೋಭಾ ಸುನಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಮುಖಂಡರಾದ ಜೋಗಿ ಮಹೇಶ್, ಕಾಂಗ್ರೆಸ್ ಮುಖಂಡರಾದ ಎಸ್.ಶಂಕರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜಣ್ಣ, ಮುಖಂಡರಾದ ಶ್ರೀಕಂಠ , ಶಶಿಕಾಂತ್, ಕಾಂಗ್ರೆಸ್ ಮುಖಂಡ ಮಂಜು, ವಿಶ್ವ, ಸಮಿತಿ ಪದಾಧಿಕಾರಿಗಳಾದ ವೆಂಕಟರಾಜು, ಮೋಹನ್, ಪರಮೇಶ್, ವಕೀಲರಾದ ಶೇಖರ್, ಆಟೋ ರಮೇಶ್, ನಿವೃತ್ತ ಅಂಚೆ ನೌಕರರಾದ ಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net