ಶಿಕ್ಷಣದ ಜತೆಗೆ ಕ್ರೀಡಾ ಕ್ಷೇತ್ರಕ್ಕೆ ಉತ್ತಮ ಕೊಡುಗೆ

chunchadri
ಚುಂಚಾದ್ರಿ ಕಪ್ ವಾಲಿಬಾಲ್ ಪಂದ್ಯಾವಳಿ ಫೈನಲ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶ್ರೀ ಪ್ರಸನ್ನನಾಥ ಸ್ವಾಮೀಜಿ, ಮಧು ಬಂಗಾರಪ್ಪ, ಆರ್.ಪ್ರಸನ್ನಕುಮಾರ್, ಡಾ. ಧನಂಜಯ ಸರ್ಜಿ, ಸಿ.ಆರ್.ಪರಮೇಶ್ವರಪ್ಪ, ರಮೇಶ್ ಇತರರಿದ್ದರು.
Published on

ಶಿವಮೊಗ್ಗ: ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠ ಧಾರ್ಮಿಕ, ಸಾಮಾಜಿಕ ಕಾರ್ಯಗಳೊಂದಿಗೆ ಕ್ರೀಡಾ ಕ್ಷೇತ್ರಕ್ಕೂ ಉತ್ತಮ ಕೊಡುಗೆ ನೀಡುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ನೆಹರು ಕ್ರೀಡಾಂಗಣದಲ್ಲಿ ಚುಂಚಾದ್ರಿ ಕಪ್ ವಾಲಿಬಾಲ್ ಪಂದ್ಯಾವಳಿ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿ, 22 ವರ್ಷಗಳಿಂದ ಪಂದ್ಯಾವಳಿ ಆಯೋಜಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಪ್ರತಿಭಾನಿತ್ವರನ್ನು ಕಳುಹಿಸಿದ ಕೀರ್ತಿ ಶ್ರೀಮಠಕ್ಕೆ ಸೇರುತ್ತದೆ ಎಂದು ತಿಳಿಸಿದರು.
ಆದಿಚುಂಚನಗಿರಿ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಸೋತರೆ ಕ್ರೀಡಾಪಟುಗಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಕ್ರೀಡೆ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಅರಿಯುವ ಸಾಧನ ಎಂದರು.
ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಬಿಇಒ ರಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್ ಇತರರಿದ್ದರು.
ವಿಜೇತರ ವಿವರ: ಬಾಲಕರ ವಿಭಾಗ: 1. ಸೇಂಟ್ ಜೋಸೆಫ್ ಪ್ರೌಢಶಾಲೆ-ಸಾಗರ, ಬಾಲಕಿಯರ ವಿಭಾಗ: 1. ನಗರ ಪ್ರೌಢಶಾಲೆ-ನಗರ.
ಬಾಲಕರ ವಿಭಾಗ(ವೈಯುಕ್ತಿಕ ಬಹುಮಾನ): ಬೆಸ್ಟ್ ಅಟ್ಯಾಕರ್-ಸವಿತ್ (ಎವಿಎಂ ಶಾಲೆ), ಬೆಸ್ಟ್ ಪಾಸರ್-ವಿಜ್ಞೇಶ್ (ಸೆಂಟ್ ಜೋಸೆಫ್), ಬೆಸ್ಟ್ ಆಲ್ ರೌಂಡರ್-ಚರಣ್(ಎವಿಎಂ ಶಾಲೆ) ಬೆಸ್ಟ್ ಬ್ಲಾಕರ್- ಮಿಲನ (ಸಹ್ಯಾದ್ರಿ ಶಾಲೆ), ಬೆಸ್ಟ್ ಲೀಬ್ರೋ-ಅಜರ್ (ಸೆಂಟ್ ಜೋಸೆಫ್)
ಬಾಲಕಿಯರ ವಿಭಾಗ (ವೈಯುಕ್ತಿಕ ಬಹುಮಾನ):ಬೆಸ್ಟ್ ಅಟ್ಯಾಕರ್-ಫಲಕ (ನಗರ ಶಾಲೆ), ಬೆಸ್ಟ್ ಪಾಸರ್- ವಿ.ಲಕ್ಷ್ಮೀ( ನಗರ ಶಾಲೆ), ಬೆಸ್ಟ್ ಆಲ್ ರೌಂಡರ್-ಸಂಕಲ್ಪ (ಆದಿಚುಂಚನಗಿರಿ ಶಾಲೆ), ಬೆಸ್ಟ್ ಬ್ಲಾಕರ್-ಬಿ.ಸಂಜನಾ(ಆದಿಚುಂಚನಗಿರಿ ಶಾಲೆ), ಬೆಸ್ಟ್ ಲೀಬ್ರೋ- ನೀತಾ (ಬಸವೇಶ್ವರ ಶಾಲೆ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net