ವಿಧುಶೇಖರ ಭಾರತೀ ಸ್ವಾಮೀಜಿಗೆ ಅದ್ದೂರಿ ಸ್ವಾಗತ

ಫೋಟೋ_ಶೀರ್ಷಿಕೆ__26_ಸಿಆರ್_ಪಿ-1ಎ(1)
ಚನ್ನರಾಯಪಟ್ಟಣದಲ್ಲಿ ಆಯೋಜಿಸಿದ್ದ ಶೃಂಗೇರಿ ಜಗದ್ಗುರುಗಳ ವಿಜಯಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಭಕ್ತರು ಮಂಗಳವಾರ ಅದ್ದೂರಿಯಾಗಿ ಬರಮಾಡಿಕೊಂಡರು.
Published on

ಚನ್ನರಾಯಪಟ್ಟಣ: ಬ್ರಾಹ್ಮಣ ಸಮಾಜದ ತಾಲೂಕು ಘಟಕ ವತಿಯಿಂದ ಆಯೋಜಿಸಿದ್ದ ವಿಜಯಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳವಾರ ಪಟ್ಟಣಕ್ಕೆ ಆಗಮಿಸಿದ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಸಹಸ್ರಾರು ಭಕ್ತರು ಅದ್ದೂರಿಯಾಗಿ ಬರಮಾಡಿಕೊಂಡರು.

ಪಟ್ಟಣ ಪ್ರವೇಶ ಮಾಡಿದ ಶ್ರೀಗಳನ್ನು ಕೋಟೆಯಲ್ಲಿರುವ ಶ್ರೀರಾಮಮಂದಿರ ಬಳಿ ವಿಪ್ರರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು, ವೇದಘೋಷ, ಮಂಗಳವಾದ್ಯ ಹಾಗೂ ಶಂಕರಸ್ತುತಿಗಳೊಂದಿಗೆ ಬ್ರಾಹ್ಮಣ ಮಹಾಸಂಘದ ವೇದಿಕೆಗೆ ಕರೆತಂದರು. ಶ್ರೀಗಳು ಕೋಟೆ ಶ್ರೀರಾಮ ಮಂದಿರ ಹಾಗೂ ಸಂಕಷ್ಟಹರ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ವಿಜಯಯಾತ್ರೆ ಆರಂಭಗೊಂಡಿತು.

ಶ್ರೀಗಳ ವಿಜಯಯಾತ್ರೆ ಅಂಗವಾಗಿ ಕೋಟೆ ಮುಖ್ಯ ಬೀದಿಯನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಎರಡೂ ಬದಿಯನ್ನು ತಳಿರು-ತೋರಣ, ವಿದ್ಯುತ್‌ದೀಪ, ಬಾಳೆಕಂಬಗಳಿಂದ ಅಲಂಕರಿಸಲಾಗಿತ್ತು.

ಮೆರವಣಿಗೆ ನಂತರ ಸ್ವಾಮೀಜಿ ಅವರನ್ನು ಬ್ರಾಹ್ಮಣ ಮಹಾಸಂಘದ ವೇದಿಕೆಗೆ ಕರೆತಂದು ಪ್ರಥಮವಾಗಿ ಧೂಳಿ ಪಾದಪೂಜೆ ನೆರವೇರಿಸಲಾಯಿತು. ತಾಲೂಕು ಹಾಗೂ ಎಲ್ಲ ಹೋಬಳಿಗಳ ಬ್ರಾಹ್ಮಣ ಸಂಘ, ಋತ್ವಿತ್ ಸಭಾ, ವಿಪ್ರ ನೌಕರರ ಸಂಘ, ಯುವ ವೇದಿಕೆ ಗಾಯತ್ರಿ ಪತ್ತಿನ ಸಹಕಾರ ಸಂಘ, ಮಹಿಳಾ ಸಂಘ, ಬಾಣಸಿಗರ ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net