ಕನ್ನಡ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ

ಕುಶಾಲನಗರದಲ್ಲಿ ಬುಧವಾರ ಕನ್ನಡ ಜ್ಯೋತಿ ರಥಯಾತ್ರೆಯ ಅದ್ದೂರಿ ಮೆರವಣಿಗೆ ನಡೆಯಿತು. ಕಿರಣ್ ಗೌರಯ್ಯ, ಕೃಷ್ಣಪ್ರಸಾದ್, ಕೆ.ಎಸ್.ನಾಗೇಶ್, ಎಂ.ಕೃಷ್ಣ, ಮೊಹಿದ್ದೀನ್, ಸಂತೋಷ್, ಫಿಲೋಮಿನಾ, ಗೌತಮ್ಮ, ಪುರಸಭೆಯ ನಂಜುಂಡ, ಧನಂಜಯ, ರಾಘವ, ದಿವ್ಯ ಇತರರು ಹಾಜರಿದ್ದರು.
ಕುಶಾಲನಗರದಲ್ಲಿ ಬುಧವಾರ ಕನ್ನಡ ಜ್ಯೋತಿ ರಥಯಾತ್ರೆಯ ಅದ್ದೂರಿ ಮೆರವಣಿಗೆ ನಡೆಯಿತು. ಕಿರಣ್ ಗೌರಯ್ಯ, ಕೃಷ್ಣಪ್ರಸಾದ್, ಕೆ.ಎಸ್.ನಾಗೇಶ್, ಎಂ.ಕೃಷ್ಣ, ಮೊಹಿದ್ದೀನ್, ಸಂತೋಷ್, ಫಿಲೋಮಿನಾ, ಗೌತಮ್ಮ, ಪುರಸಭೆಯ ನಂಜುಂಡ, ಧನಂಜಯ, ರಾಘವ, ದಿವ್ಯ ಇತರರು ಹಾಜರಿದ್ದರು.
Published on

ಕುಶಾಲನಗರ: ಕರ್ನಾಟಕ ಸುವರ್ಣ ಸಂಭ್ರಮ-50ರ ಅಂಗವಾಗಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯದೊಂದಿಗೆ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ಪಟ್ಟಣದ ಬೈಚ್ಚನಹಳ್ಳಿಯ ಮಾರಮ್ಮ ದೇವಸ್ಥಾನದ ಬಳಿ ಬುಧವಾರ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ಕುಶಾಲನಗರ ತಾಲೂಕು ಆಡಳಿತ, ಕುಶಾಲನಗರ ಪುರಸಭೆ, ವಿವಿಧ ಶಾಲಾ- ಕಾಲೇಜುಗಳ ವತಿಯಿಂದ ತಹಸೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದಲ್ಲಿ ಕನ್ನಡ ರಥವನ್ನು ಸ್ವಾಗತಿಸಲಾಯಿತು.

ಸೋಮವಾರಪೇಟೆ ತಾಲೂಕಿನಿಂದ ಕುಶಾಲನಗರ ತಾಲೂಕಿಗೆ ಬುಧವಾರ ಬೆಳಗ್ಗೆ ಆಗಮಿಸಿದ ಕನ್ನಡ ರಥವನ್ನು ಭುವನೇಶ್ವರಿ ಪ್ರತಿಮೆಗೆ ಹೂಮಾಲೆ ಹಾಕಿ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬರಮಾಡಿಕೊಳ್ಳಲಾಯಿತು.

ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯಾಧಿಕಾರಿ ಉದಯ್, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಖಜಾಂಚಿ ಕೆ.ವಿ.ಉಮೇಶ, ನಿರ್ದೇಶಕರಾದ ಸೋಮಣ್ಣ, ಕಾಳಪ್ಪ, ಮಂಜುನಾಥ್, ಕರವೇ ತಾಲೂಕು ಅಧ್ಯಕ್ಷ ಅಣ್ಣಯ್ಯ, ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆಯ ಫಿಲೋಮಿನಾ, ಕಂದಾಯ ಇಲಾಖೆಯ ಸಂತೋಷ್, ಗೌತಮ್ಮ, ಸಚಿನ್, ಸರ್ಕಾರಿ ಬಾಲಕಿಯರ ಪ್ರಢಶಾಲೆ ಮುಖ್ಯಶಿಕ್ಷಕಿ ಬಿ.ಎನ್.ಪುಷ್ಪಾ, ಹೇಮಂತ್, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಕುಮಾರ್, ಉಪನ್ಯಾಸಕ ಡಾ.ಸುನೀಲ್, ಪ್ರಮುಖರಾದ ಮೊಹಿದ್ದೀನ್, ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಮೆರವಣಿಗೆ : ಕನ್ನಡ ಜೋತಿ ರಥವನ್ನು ಅದ್ದೂರಿಯಾಗಿ ಬರಮಾಡಿಕೊಂಡ ನಂತರ ಬೈಚ್ಚನಹಳ್ಳಿಯ ಮಾರಮ್ಮ ದೇವಸ್ಥಾನದಿಂದ ಮಡಿಕೇರಿ ಮೈಸೂರು ರಸ್ತೆಯಲ್ಲಿ ಸಾಗಿ ಕಾರ್ಯಪ್ಪ ವೃತ್ತದ ಮೂಲಕ ರಥ ಬೀದಿಯ ಮೂಲಕ ಸೋಮೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಸಾವಿರಾರು ಜನರು ರಥವನ್ನು ವೀಕ್ಷಿಸಿ ರಥದೊಂದಿಗೆ ಪೋಟೋ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ರಥದೊಂದಿಗೆ ಡೊಳ್ಳು ಕುಣಿತ, ವಿದ್ಯಾರ್ಥಿಗಳ ಬ್ಯಾಂಡ್ ಆಕರ್ಷಕವಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಮಣಜೂರು ಮಂಜುನಾಥ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net