

ಮುಂಡಗೋಡ: ಇಲ್ಲಿಯ ಅಯ್ಯಪ್ಪಸ್ವಾಮಿ ದೇವರ ಪುನರ್ ಪ್ರತಿಷ್ಠಾಪನೆ, ರಜತ ಮಹೋತ್ಸವ, ಲಕ್ಷ ದೀಪೋತ್ಸವವು ಡಿ. 28ರಂದು ಶನಿವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣಕ್ಕೆ ಆಗಮಿಸಿದ ರ್ಕ ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ರಜತ ಮಹೋತ್ಸವದ ನಿಮಿತ್ತ ಗಣೇಶ ಪೂಜೆ, ಸ್ಥಾನದೇವತಾ ಪೂಜೆ ಸೇರಿದಂತೆ ವಿವಿಧ ಧಾರ್ವಿುಕ ಪೂಜಾ ಕಾರ್ಯಕ್ರಮಗಳು, ಸುಮುಖ ಪೂಜೆ, ಅಧಿವಾಸ ಪೂಜೆ, ಬಿಂಬಶುದ್ಧಿಪೂರ್ವಕ, ಜಲಧಿವಾಸ, ಗಣಹೋಮ, ನವಗೃಹ ಹೋಮ ಜರುಗಿದವು
ಶುಕ್ರವಾರ ರ್ಕ ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳನ್ನು ತೆರೆದ ವಾಹನದ ಮೂಲಕ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು. ನಂತರ ಅಯ್ಯಪ್ಪಸ್ವಾಮಿ ಪ್ರತಿಷ್ಠಾಪನೆ, ಕಲಾನ್ಯಾಸ, ಕಲಾವೃದ್ಧಿ ಹೊಮಕುಂಬಾಭಿಷೇಕ, ಮಹಾಪೂಜೆ ನಡೆಯಿತು. ಸಂಜೆ ಶ್ರೀಗಳಿಂದ ಆಶೀರ್ವಚನ ನಡೆಯಿತು. ಡಿ. 28ರಂದು ಸಂಜೆ 6.30ಕ್ಕೆ ಮಹಾಮಂಡಲ ಪೂಜೆ,ದೀಪಾರಾಧನೆ ಪೂಜೆ, ಲಕ್ಷ ದೀಪೋತ್ಸವ ಹಾಗೂ ಅನ್ನ ಸಂತರ್ಪಣೆ ನೆರವೇರಲಿದೆ.