

ಬೈಲಹೊಂಗಲ: ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿಯಿಂದ ಜ.26ರಂದು ಜರುಗಲಿರುವ ರಾಯಣ್ಣನ 25ನೇ ವರ್ಷದ ಆತ್ಮಜ್ಯೋತಿ ಯಾತ್ರೆಯನ್ನು ಸಕಲ ವಾದ್ಯಮೇಳಗಳೊಂದಿಗೆ ವಿಜಂಭಣೆಯಿಂದ ನೆರವೇರಿಸಲಾಗುವುದು ಎಂದು ಸಮಿತಿ ಸಂಸ್ಥಾಪಕ ಅಧ್ಯ ಸಿ.ಕೆ. ಮೆಕ್ಕೇದ ಹೇಳಿದರು.
ಪಟ್ಟಣದ ಐಎಂಎ ಹಾಲ್ನಲ್ಲಿ ಗುರುವಾರ ಹಮ್ಮಿಕೊಂಡಿದ್ದ 25ನೇ ವರ್ಷದ ಜ್ಯೋತಿ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.\ ಸಮಿತಿ ಅಧ್ಯ ರಾಜು ಸೊಗಲ ಮಾತನಾಡಿ, ಸ್ಮರಣೋತ್ಸವ ಸಮಿತಿಯು ಸತತ 24 ವರ್ಷಗಳಿಂದ ರಾಯಣ್ಣನನ್ನು ಗಲ್ಲಿಗೇರಿಸಿದ ನಂದಗಡದಿಂದ ಕಿತ್ತೂರು, ಸಂಗೊಳ್ಳಿ ಮಾರ್ಗವಾಗಿ ವೀರಮಾತೆ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳಕ್ಕೆ ರಾಯಣ್ಣನ ಆತ್ಮಜ್ಯೋತಿ ತರಲಾಗುತ್ತಿದೆ. ರಾಯಣ್ಣನ ಶೌರ್ಯ, ಸಾಹಸ, ದೇಶಪ್ರೇಮ ಎತ್ತಿಹಿಡಿಯಲಾಗುವುದು ಎಂದರು.
ಪತ್ರಕರ್ತ ಈಶ್ವರ ಹೋಟಿ, ಮಹಾಂತೇಶ ತುರಮರಿ, ಸಮಿತಿ ಉಪಾಧ್ಯ ಸೋಮನಾಥ ಸೊಪ್ಪಿಮಠ ಮಾತನಾಡಿದರು. ಮುಖಂಡರಾದ ಡಾ.ಮಂಜುನಾಥ ಮುದಕನಗೌಡರ, ಡಾ.ಸಾಗರ ಕುಲಕರ್ಣಿ, ಶ್ರೀಶೆಲ ಯಡಳ್ಳಿ, ಮಹಾಂತೇಶ ಮತ್ತಿಕೊಪ್ಪ, ಶಿವಾನಂದ ಬೆಳಗಾವಿ, ರಫೀಕ್ ಬಡೇರ, ಯಲ್ಲಪ್ಪ ದಳವಾಯಿ, ಲಕ್ಷ$್ಮಣ ಸೋಮನಟ್ಟಿ, ಮಾರುತಿ ಶರೆಗಾರ, ಉಪಾಧ್ಯ ಸೋಮನಾಥ ಸೊಪ್ಪಿಮಠ, ಅಶೋಕ ಮೂಗಬಸವ, ಮಹಾಂತೇಶ ಜಿಗಜಿನ್ನಿ, ನಾಗೇಶ ಯಕ್ಕುಂಡಿ, ಎಸ್.ಕೆ.ಮೆಳ್ಳಿಕೇರಿ, ಬಾಬು ದೇಶನೂರ ಇತರರಿದ್ದರು.