

ಕುಮಟಾ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಸಿದ್ದಾಪುರದ ಭುವನೇಶ್ವರಿ ದೇವಸ್ಥಾನದಿಂದ ಹೊರಟ ಕನ್ನಡ ರಥವು ಭಾನುವಾರ ಸಾಯಂಕಾಲ ಪಟ್ಟಣದ ಗಿಬ್ ವೃತ್ತಕೆ ಆಗಮಿಸಿತು. ಈ ವೇಳೆ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಸಂಭ್ರಮದಿಂದ ಸ್ವಾಗತಿಸಲಾಯಿತು.
ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ ಸತೀಶ ಗೌಡ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಸಾಹಿತಿಗಳಾದ ರೋಹಿದಾಸ ನಾಯಕ, ಬೀರಣ್ಣ ನಾಯಕ, ಜಿಲ್ಲಾ ಗೌರವ ಕಾರ್ಯದರ್ಶಿ ಪಿ. ಆರ್. ನಾಯ್ಕ, ತಾಲೂಕಾಧ್ಯಕ್ಷ ಸುಬ್ಬಯ್ಯ ನಾಯ್ಕ, ಪಿ.ಎಂ.ಮುಕ್ರಿ, ಗೌರವ ಕಾರ್ಯದರ್ಶಿ ಪ್ರಮೋದ ನಾಯ್ಕ, ಪ್ರದೀಪ ನಾಯಕ, ಸೂರಜ ನಾಯ್ಕ, ರಾಜು ಮಾಸ್ತಿಹಳ್ಳ, ಪಿಎಸ್ಐ ಮಂಜುನಾಥ ಗೌಡ ಇನ್ನಿತರರು ಇದ್ದರು.
ಬಳಿಕ ಕನ್ನಡಾಂಬೆಯ ರಥವನ್ನು ಮೆರವಣಿಗೆಯಲ್ಲಿ ತಾಲೂಕು ಸೌಧದ ಎದುರು ಒಯ್ದು ಪೂಜೆ ಸಲ್ಲಿಸಲಾಯಿತು. ಇದಕ್ಕೂ ಮುನ್ನ ತಾಲೂಕಿನ ಧಾರೇಶ್ವರದಲ್ಲಿ ಸಾರ್ವಜನಿಕರು ಕನ್ನಡ ರಥಕ್ಕೆ ಸ್ವಾಗತಿಸಿ ಕನ್ನಡಾಂಬೆಗೆ ಗೌರ ಸಲ್ಲಿಸಿದರು. ಈ ವೇಳೆ ರಾಮು ಅಡಿ, ಸಚಿನ್ ನಾಯ್ಕ, ಎಸ್.ಟಿ.ನಾಯ್ಕ, ಕೃಷ್ಣ ನಾಯ್ಕ, ನಾಗೇಶ ನಾಯ್ಕ, ಪಿ.ಆರ್.ನಾಯ್ಕ, ಇನ್ನಿತರರು ಇದ್ದರು.