ಗಣೇಶನಿಗೆ ಭವ್ಯ ಸ್ವಾಗತ

8 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾನಗರಿ ಧಾರವಾಡದಲ್ಲಿ ವಿಘ್ನ ನಿವಾರಕ ಗಣೇಶನಿಗೆ ಸಂಭ್ರಮದಿಂದ ಸ್ವಾಗತಿಸಲಾಗಿದೆ. ಭಾದ್ರಪದ ಶುಕ್ಲ ಚೌತಿಯಾದ ಶನಿವಾರ ಎಲ್ಲರ ಮನೆ ಮನಗಳಲ್ಲಿ ಗಜವದನ ಪ್ರತಿಷ್ಠಾಪನೆಯಾಗಿದ್ದಾನೆ.
ನಗರದಲ್ಲಿ 200ಕ್ಕೂ ಹೆಚ್ಚು ಪ್ರದೇಶದಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಡಿಜೆ ಸಂಗೀತ, ಮೆರವಣಿಗೆ ಮೂಲಕ ಗಣೇಶನನ್ನು ಬರಮಾಡಿಕೊಳ್ಳಲಾಗಿದೆ. ಅದರಲ್ಲೂ ವನಸ್ಪತಿ, ಚೂರ್ಣಗಳಿಂದ ತಯಾರಿಸಲ್ಪಟ್ಟ ಬಣ್ಣ ಲೇಪಿತ ನೈಸರ್ಗಿಕ ಪರಿಸರ ಸ್ನೇಹಿ ಗಣೇಶ ವಿಗ್ರಹಗಳು ಸಾರ್ವಜನಿಕ ಸ್ಥಳ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪನೆಗೊಂಡಿವೆ. ಈ ಸಲ ಕಟ್ಟುನಿಟ್ಟಾಗಿ ಜಿಲ್ಲಾಡಳಿತ ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆ ನಿಷೇಧ ಮಾಡಿದ ಪರಿಣಾಮ ಬಹುತೇಕ ಕಡೆ ಪರಿಸರ ಮೂರ್ತಿಗಳಿಗೆ ಆದ್ಯತೆ ನೀಡಲಾಗಿದೆ.
ಸುಭಾಷ ರಸ್ತೆ, ಗಾಂಧಿಚೌಕ್​, ಮಾಳಮಡ್ಡಿ, ಹೆಬ್ಬಳ್ಳಿ ಅಗಸಿ, ಸಂಗಮ ವೃತ್ತ, ಕೆಸಿಡಿ, ಸೇರಿ ವಿವಿಧ ಬಡಾವಣೆಗಳಲ್ಲಿ ತರಹೇವಾಗಿ ರೂಪಗಳಲ್ಲಿ ಗಣೇಶ ಅನಾವರಣಗೊಂಡಿದ್ದಾನೆ. ಗಣೇಶ ಮೂರ್ತಿಗಳ ಜತೆಗೆ ಗಣೇಶ ಮಂಟಪಗಳು ಸಹ ಜನರ ಗಮನ ಸೆಳೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net