ಕ್ರಾಂತಿಕಾರಿ ರಥಯಾತ್ರೆಗೆ ಅದ್ದೂರಿ ಸ್ವಾಗತ

bbgd 29-1
ಬಸವನಬಾಗೇವಾಡಿ ಪಟ್ಟಣದ ಕನಕೇಶ್ವರ ದೇವಸ್ಥಾನ ಆವರಣ ಮುಂದೆ ಒಳ ಮೀಸಲಾತಿ ಕುರಿತು ಸಮಾಜದವರಿಗೆ ಆಗುವ ಲಾಭ ನಷ್ಟದ ಕುರಿತು ಕಾರ್ಯಕ್ರಮ ನಡೆಯಿತು.
Published on

ಬಸವನಬಾಗೇವಾಡಿ: ಒಳ ಮೀಸಲಾತಿ ಕ್ರಾಂತಿಕಾರಿ ರಥಯಾತ್ರೆ ಸೋಮವಾರ ರಾತ್ರಿ ಪಟ್ಟಣಕ್ಕೆ ಆಗಮಿಸಿತು.

ಪಟ್ಟಣದ ತೆಲಗಿ ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಹೋರಾಟ ಸಮಿತಿಯಿಂದ ರಥಯಾತ್ರೆಗೆ ಅದ್ದೂರಿಯಾಗಿ ಸ್ವಾಗತ ಕೋರಿದರು.

ಬಳಿಕ ಪಟ್ಟಣದ ಕನಕೇಶ್ವರ ದೇವಸ್ಥಾನ ಆವರಣ ಎದುರುಗಡೆ ಒಳಮೀಸಲಾಯಿತಿಯಿಂದ ಸಮಾಜದವರಿಗೆ ಆಗುವ ಲಾಭ- ನಷ್ಟದ ಕುರಿತು ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬೆಂಗಳೂರಿನ ನಾಗರಾಜಪ್ಪ ಮಾತನಾಡಿ, ಈ ಅವಧಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಬೇಕು. ಸಾಮಾಜಿಕ ನ್ಯಾಯದಡಿ ಕೊಡಬೇಕಾದ ಒಳ ಮೀಸಲಾತಿಯನ್ನು ಮೂರು ತಿಂಗಳೊಳಗಾಗಿ ಮಾಡುತ್ತೇನೆ ಎಂದು ಸಿ.ಎಂ. ಸಿದ್ದರಾಮಯ್ಯ ಅವರೇ ಭರವಸೆ ನೀಡಿದ್ದರು ಎಂದು ತಿಳಿಸಿದರು. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಸುಪ್ರಿಂಕೋರ್ಟಿನ ಆದೇಶದ ಮೇರೆಗೆ ಜಾರಿಗೆ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಸಂಚಾಲಕ ಅರವಿಂದ ಸಾಲವಾಡಗಿ, ಬಸವರಾಜ ಕಲ್ಯಾಣಿ, ಅನೀಲ ಮ್ಯಾಗೇರಿ, ಬಸಲಿಂಗಪ್ಪ ನಂದಿ, ಮಹೇಶ ಕಲ್ಯಾಣಿ, ಸಾಯಪ್ಪ ಮ್ಯಾಗೇರಿ, ಹನುಮಂತ ಮ್ಯಾಗೇರಿ, ಬಸವಗೊಂಡಪ್ಪ ಹಾದಿಮನಿ, ಪರಸಪ್ಪ ಮ್ಯಾಗೇರಿ, ತಿಪ್ಪಣ್ಣ ಮ್ಯಾಗೇರಿ, ಸಂಜು ಕಲ್ಯಾಣಿ , ಹನುಮಂತ ಅಂಬಾಗೋಳ, ಶ್ರೀಶೈಲ ಹೆಬ್ಬಾಳ, ಪರಸಪ್ಪ ಕಡಕೋಳ, ಬಿ. ಎಂ. ತೇಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net