ರನ್ನ ರಥಯಾತ್ರೆಗೆ ಅದ್ದೂರಿ ಸ್ವಾಗತ

A grand welcome for the Ranna Rath Yatra
ಕೆರೂರ ಪಟ್ಟಣಕ್ಕೆ ಆಗಮಿಸಿದ ರನ್ನ ವೈಭವದ ರಥಯಾತ್ರೆಯನ್ನು ಪಟ್ಟಣ ಪಂಚಾಯಿತಿ ಆವರಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ರಮೇಶ ಮಾಡಬಾಳ, ವಿರೇಶ ಬಡಿಗೇರ, ಮೋದಿನಸಾಬ ಚಿಕ್ಕೂರ, ವಿಠ್ಠಗೌಡ ಗೌಡರ, ಕುಮಾರ ಐಹೊಳಿ, ಸುರೇಶ ಪೂಜೇರಿ ಮತ್ತಿತರರಿದ್ದಾರೆ.
Published on

ಕೆರೂರ: ರನ್ನ ವೈಭವದ ಅಂಗವಾಗಿ ಪಟ್ಟಣಕ್ಕೆ ಆಗಮಿಸಿದ ರನ್ನ ರಥಯಾತ್ರೆಯನ್ನು ಪಟ್ಟಣ ಪಂಚಾಯಿತಿ ಆವರಣದಲ್ಲಿ ಬುಧವಾರ ಸ್ವಾಗತಿಸಲಾಯಿತು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ಮಾತನಾಡಿ, ಮುಧೋಳ ಹಾಗೂ ರನ್ನ ಬೆಳಗಲಿಯಲ್ಲಿ 22 ರಿಂದ 24ರವರೆಗೆ ಆಯೋಜಿಸಿರುವ ರನ್ನ ಉತ್ಸವದ ಯಶಸ್ಸಿಗೆ ಪಟ್ಟಣದ ಕಲಾವಿದರು, ಸಾಹಿತಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಸದಸ್ಯರಾದ ವಿಠ್ಠಗೌಡ ಗೌಡರ, ಕುಮಾರ ಐಹೊಳಿ, ಮುಖಂಡರಾದ ಸುರೇಶ ಪೂಜೇರಿ, ಉಪತಹಸೀಲ್ದಾರ್ ವಿರೇಶ ಬಡಿಗೇರ, ಪ.ಪಂ ಸಿಬ್ಬಂದಿ ಎಂ.ಐ. ಹೊಸಮನಿ, ಜಿ.ಎ. ನದ್ಾ, ಅನಿಲ ಕಪಾಟೆ, ಬಸವರಾಜ ಕಟ್ಟಿಮನಿ, ಗೀತಾ ಕಲಗುಡಿ, ಮಂಜುಳಾ ಹಿರೇಮಠ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net